Home » ಮುಂದಿನ ವಾರ ರಷ್ಯಾಗೆ ಜೈಶಂಕ‌ರ್
 

ಮುಂದಿನ ವಾರ ರಷ್ಯಾಗೆ ಜೈಶಂಕ‌ರ್

by Kundapur Xpress
Spread the love

ಹೊಸದಿಲ್ಲಿ : ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಆಗಸ್ಟ್ 21ರಂದು ತಮ್ಮ ರಷ್ಯಾದ ಸಹವರ್ತಿ ಸೆರ್ಗೆಯ್ ಲಾವೊವ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಲಾವೊವ್ ಅವರ ಸಚಿವಾಲಯ ತಿಳಿಸಿದೆ.

ರಷ್ಯಾದ ಕಚ್ಚಾ ತೈಲದ ಖರೀದಿಗೆ ಸಂಬಂಧಿಸಿದಂತೆ ಈ ತಿಂಗಳ ಆರಂಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಆಮದುಗಳ ಮೇಲೆ ಹೆಚ್ಚಿನ ಸುಂಕ ಘೋಷಿಸಿದಾಗಿನಿಂದ ಭಾರತ ಮತ್ತು ರಷ್ಯಾ ತಮ್ಮ ಕಾರ್ಯತಂತ್ರದ ಪಾಲುದಾರಿಕೆ ಚರ್ಚಿಸಿವೆ.

ಮೂಲಗಳ ಪ್ರಕಾರ, ಜೈಶಂಕರ್, ಆಗಸ್ಟ್ 18 ರಿಂದ 21 ರವರೆಗೆ ರಷ್ಯಾಕ್ಕೆ ಪ್ರಯಾಣಿಸುವ ಸಾಧ್ಯತೆಯಿದೆ, ಅಲ್ಲಿ ಅವರು ರಷ್ಯಾದ ಅಧಿಕಾರಿಗಳು ಮತ್ತು ಉಪ ಪ್ರಧಾನಿ ಡೆನ್ಸಿಸ್ ಮಂಟುರೊವ್ ಅವರೊಂದಿಗೆ ಸಂಭಾವ್ಯ ಸಭೆಗಳನ್ನು ನಡೆಸಲಿದ್ದಾರೆ. ಅದೇ ರೀತಿ ಆಗಸ್ಟ್ 20ರಂದು ವ್ಯಾಪಾರ ವೇದಿಕೆಯೊಂದನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

 

Related Articles

error: Content is protected !!