Home » ರಕ್ಷಣಾ ಮಾಹಿತಿ ಸೋರಿಕೆ ಪಾಕ್ ಗೂಢಾಚಾರಿ ಸೆರೆ
 

ರಕ್ಷಣಾ ಮಾಹಿತಿ ಸೋರಿಕೆ ಪಾಕ್ ಗೂಢಾಚಾರಿ ಸೆರೆ

by Kundapur Xpress
Spread the love

ಜೈಸಲ್ವೇರ್ ! ಭಾರತದ ರಕ್ಷಣಾ ಚಟುವಟಿಕೆಗಳ ಮಾಹಿತಿ ಸೋರಿಕೆ ಮಾಡುತ್ತಿದ್ದ ಪಾಕಿಸ್ತಾನಿ ಗೂಢಾಚಾರಿ ಮಹೇಂದ್ರ ಪ್ರಸಾದ್‌ ನನ್ನು ರಾಜಸ್ಥಾನದ ಜೈಸಲ್ಟರ್‌ನಲ್ಲಿ ಸಿಐಡಿ ಗುಪ್ತಚರ ಪೊಲೀಸರು ಬಂಧಿಸಿದ್ದಾರೆ.

ಚಂದನ್ ಫೀಲ್ಡ್ ಫೈರಿಂಗ್ ರೇಂಜ್‌ ನಲ್ಲಿ ಇರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಅತಿಥಿ ಗೃಹದಲ್ಲಿ ಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ ಮಹೇಂದ್ರ ಪ್ರಸಾದ್  ರಕ್ಷಣಾ ಚಟುವಟಿಕೆಗಳ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ್ದಾನೆ.

ಮುಂಬರುವ ಸ್ವಾತ್ರಂತ್ರ್ಯ ದಿನಾಚರಣೆ ವೇಳೆ ದೇಶದ್ರೋಹಿಗಳ ಮೇಲೆ ಕಣ್ಣಾವಲು ಹೆಚ್ಚಿಸಲಾಗಿದೆ ಎಂದು ಸಿಐಡಿ (ಭದ್ರತೆ) ಇನ್‌ಸ್ಪೆಕ್ಟ‌ರ್ ಜನರಲ್ ಡಾ.ವಿಷ್ಣುಕಾಂತ್ ಹೇಳಿದ್ದಾರೆ. ಪ್ರಸಾದ್ ಬಂಧಿಸಲಾಗಿದ್ದು, ಈತ ಉತ್ತರಾಖಂಡ್‌ನ ಅಲ್ಲೋರದ ಪಲ್ಯೂನ್ ನಿವಾಸಿ ಆಗಿದ್ದಾನೆ. ಸಾಮಾಜಿಕ ಜಾಲತಾಣದ ಮೂಲಕ ಪಾಕ್ ಗುಪ್ತಚರ ಹ್ಯಾಂಡ್ಲರ್ ಅನ್ನು ಪ್ರಸಾದ್ ಸಂಪರ್ಕಿಸಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಡಿಆರ್‌ಡಿಒ ವಿಜ್ಞಾನಿಗಳು ಮತ್ತು ಭಾರತೀಯ ಸೇನೆ ಉನ್ನತಾಧಿಕಾರಿಗಳ ಚಲನವಲನ ಬಗ್ಗೆ ರಹಸ್ಯ ಮಾಹಿತಿ ಸೋರಿಕೆ ಮಾಡುತ್ತಿದ್ದ ಎಂಬ ಆರೋಪದಡಿ ಪ್ರಸಾದ್ ನನ್ನು ಸಿಐಡಿ (ಭದ್ರತೆ) ಪೊಲೀಸರು ಬಂಧಿಸಿದ್ದರು. ಕ್ಷಿಪಣಿ ಮತ್ತು ಶಸ್ತ್ರಾಸ್ತ್ರ ಪರೀಕ್ಷೆ ನಡೆಸುವ ಚಂದನ್ ಫೀಲ್ಡ್ ಫೈರಿಂಗ್ ರೇಂಜ್‌ಗೆ ಸ್ಥಳ ಪರಿಶೀಲನೆ ಮಾಡಲು ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಪ್ರಸಾದ್ ಬಂಧನದ ಬಳಿಕ ಭದ್ರತಾ ಪಡೆಗಳು ಜಂಟಿಯಾಗಿ ವಿಚಾರಣೆ ನಡೆಸಿದ್ದು, ಅಧಿಕಾರಿಗಳು ಆತನ ಮೊಬೈಲ್ ಫೋನ್ ಅನ್ನು ಕೂಲಂಕಷವಾಗಿ ಪರಿಶೀಲನೆ ಮಾಡಿದ್ದಾರೆ.

 

Related Articles

error: Content is protected !!