Home » ಜಾರ್ಖಂಡ್‌ ಸ್ವರೂಪ ಬದಲಿಸಲು ಷಡ್ಯಂತ್ರ
 

ಜಾರ್ಖಂಡ್‌ ಸ್ವರೂಪ ಬದಲಿಸಲು ಷಡ್ಯಂತ್ರ

ಪ್ರಧಾನಿ ಮೋದಿ

by Kundapur Xpress
Spread the love

ರಾಂಚಿ : ಜಾರ್ಖಂಡ್‌ ಸ್ವರೂಪ ಬದಲಿಸಲು ಭಾರಿ ಷಡ್ಯಂತ್ರ ನಡೆದಿದೆ. ರಾಜ್ಯದಲ್ಲಿ ಅವ್ಯಾಹತವಾಗಿರುವ ಅಕ್ರಮ ನುಸುಳುಕೋರರ ಹಾವಳಿಯು ನಿರ್ಣಾಯಕ ಚುನಾವಣೆಯಲ್ಲಿ ವಿಚಾರವಾಗಲಿದೆ ರೋಟಿ, ಬೇಟಿ ಮತ್ತು ಮಾಟಿ (ಆಹಾರ, ಮಗಳು ಮತ್ತು ಭೂಮಿ) ಇವುಗಳ ಸಂರಕ್ಷಣೆ ವಿಚಾರವೂ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.

ಸಂಥಾಲ್‌ನಲ್ಲಿ ಬುಡಕಟ್ಟು ಜನಸಂಖ್ಯೆ ಅರ್ಧಕ್ಕೆ ಕುಸಿದಿದೆ ಎಂದು ಕಳವಳ ವ್ಯಕ್ತಪಡಿಸಿದ ಪ್ರಧಾನಿ, ನಿಮ್ಮ ಬುಡಕಟ್ಟು ಕುಟುಂಬಗಳನ್ನು ರಕ್ಷಿಸಿಕೊಳ್ಳಿ ಎಂದು ಜನತೆಗೆ ಕರೆ ನೀಡಿದರು ದೇವೋಗಡ್ ಜಿಲ್ಲೆಯ ಸಾರಥ್ ಗ್ರಾಮದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಪ್ರಧಾನಿ ಮಾತನಾಡಿದರು. ಜಾರ್ಖಂಡ್ ನಲ್ಲಿ ಪ್ರವಾಸ ಮಾಡುವಾಗೆಲ್ಲ ಅಕ್ರಮ ನುಸುಳುಕೋರರ ಹಾವಳಿಯೇ ಬಲು ದೊಡ್ಡ ಆತಂಕದ ವಿಚಾರವಾಗಿ ಕಂಡು ಬರುತ್ತಿದೆ. ಸಂಥಾಲ್‌ನಲ್ಲಿ ಬುಡಕಟ್ಟು ಜನಸಂಖ್ಯೆ ಅರ್ಧಕ್ಕರ್ಧ ಕುಸಿದಿದೆ. ನಮ್ಮ ಬುಡಕಟ್ಟು ಕುಟುಂಬಗಳನ್ನು ಮತ್ತು ಪ್ರತಿಯೋರ್ವ ಜಾರ್ಖಂಡಿಯನ್ನು ಈ ಅಪಾಯದಿಂದ ಪಾರು ಮಾಡಬೇಕಿದೆ ಎಂದರು.

   

Related Articles

error: Content is protected !!