ನವದೆಹಲಿ : ಬಿಜೆಪಿ ತನ್ನ ಪಕ್ಷದ ಚಿಹ್ನೆಯಾಗಿ ಕಮಲ’ ಬಳಸುವುದನ್ನು ತಡೆಯುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ನ್ಯಾ| ವಿಕ್ರಮ್ ನಾಥ್ ಮತ್ತು ಪ್ರಸನ್ನ ಬಿ.ವರಾಳೆ ಅವರ ಪೀಠ ಇದನ್ನು ಪ್ರಚಾರಕ್ಕಾಗಿ ಸಲ್ಲಿಸಿರುವ ಅರ್ಜಿ ಎಂದಿದ್ದು, ಅದನ್ನು ವಜಾಗೊಳಿಸುವ ಮಧ್ಯಪ್ರದೇಶ ಹೈಕೊರ್ಟ್‌ನ ತೀರ್ಪನ್ನು ಎತ್ತಿಹಿಡಿದಿದೆ. ‘ಕಮಲ ರಾಷ್ಟ್ರೀಯ ಹೂವಾಗಿರುವ ಕಾರಣ ಅದನ್ನು ರಾಜಕೀಯ ಪಕ್ಷಗಳಿಗೆ ಚಿಹ್ನೆಯಾಗಿ ನೀಡಿದರೆ ರಾಷ್ಟ್ರದ ಸಮಗ್ರತೆಗೆ ಅವಮಾನವಾಗುತ್ತದೆ’ ಎಂದು ಮಧ್ಯ ಪ್ರದೇಶದ ಜಯಂತ್ ವಿಪತ್ ತಮ್ಮ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.