98
ತಿರುವನಂತಪುರಂ : ತಂತ್ರಜ್ಞಾನ ಕ್ಷೇತ್ರದಿಂದ ನೇರ ರಾಜಕೀಯ ರಂಗಕ್ಕೆ ಧುಮುಕಿದ ರಾಜೀವ್ ಚಂದ್ರಶೇಖರ್, ಸೋಮವಾರ ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಕೇರಳದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದಾಗಿ ಇದೇ ಸಂದರ್ಭ ಅವರು ಘೋಷಿಸಿದ್ದಾರೆ.
ಕೇರಳದಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್ಗಳ ರಾಜನೀತಿಯನ್ನು ಕೊನೆಗಾಣಿಸುವ ಮೂಲಕ ರಾಜ್ಯದಲ್ಲಿ ಪರಿವರ್ತನೆ ತರುವುದು ತನ್ನ ಚಿಂತನೆಯಾಗಿದೆ. ಕೇರಳದ ಎಲ್ಲಾ ವರ್ಗಗಳು ಮತ್ತು ಧರ್ಮೀಯರ ಸಮಗ್ರ ಅಭಿವೃದ್ಧಿ ಮೂಲಕ ವಿಕಸಿತ ಕೇರಳ ಸಾಕಾರ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಾಗಿದ್ದು, ಇದನ್ನು ತಾನು ಸಾಕಾರಗೊಳಿಸಲಿದ್ದೇನೆ ಎಂದು ತಿಳಿಸಿದರು

