ವಾಷಿಂಗ್ಟನ್ : ಪಂಜಾಬ್ ಗ್ಯಾಂಗ್‌ಸ್ಟರ್ ಪವಿತ್ತರ್ ಸಿಂಗ್ ಬಟಾಲಾ ಸೇರಿದಂತೆ 8 ಖಲಿಸ್ತಾನಿ ಉಗ್ರರನ್ನು ಅಮೆರಿಕದ ಫೆಡರಲ್ ತನಿಖಾ ಸಂಸ್ಥೆ (ಎಫ್ ಬಿ ಐ) ಬಂಧಿಸಿದೆ. ರಾಷ್ಟ್ರೀಯ ತನಿಖಾ ದಳಕ್ಕೆ(ಎನ್‌ಐಎ) ಬೇಕಾಗಿರುವ ಅಮೆರಿಕದಲ್ಲಿ ಬಂಧಿತ ಪವಿತ್ತರ್ ಸಿಂಗ್ ನಿಷೇಧಿತ ಬಬ್ಬರ್ ಖಲ್ಲಾ ಇಂಟರ್‌ನ್ಯಾಷನಲ್ (ಬಿಕೆಐ) ಉಗ್ರ ಚಟುವಟಿಕೆಗಳಿಗೂ ಸಂಬಂಧವಿದೆ.
ಜೂನ್‌ನಲ್ಲಿ ಎನ್‌ಐಎ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಕುಖ್ಯಾತ ಬಿಕೆಐ ಉಗ್ರರಾದ ಲಖ್‌ಬಿರ್ ಲಂಡ ಮತ್ತು ಜತಿಂದರ್ ಜೋತಿಯೊಂದಿಗೆ ಬಟಾಲಾ ಹೆಸರೂ ಇತ್ತು. ಒಂದಕ್ಕಿಂತ ಹೆಚ್ಚು ತನಿಖಾ ಸಂಸ್ಥೆಗಳು ಜತೆಗೂಡಿ ಇವರಿಬ್ಬರನ್ನು ಬಂಧಿಸಲಾಗಿತ್ತು. ಭಾರತೀಯ ಗುಪ್ತಚರ ಮಾಹಿತಿ ಪ್ರಕಾರ, ಮೂವರೂ ಗ್ಯಾಂಗ್‌ಸ್ಟರ್ ಮತ್ತು ಭಯೋತ್ಪಾದಕರ ಸಂಪರ್ಕ ಜಾಲದ ಅಂಗವಾಗಿದ್ದಾರೆ

ತಂಡಗಳಿಂದ ಕಾರ್ಯಾಚರಣೆ :
ಜು.11ರಂದು ಕ್ಯಾಲಿಫೋರ್ನಿಯಾದಲ್ಲಿ ಸ್ಯಾನ್ ಜಾಕಿನ್ ಕೌಂಟಿ ಶೆರಿಫ್ ಪೊಲೀಸ್, ಸ್ಟಾಕ್‌ನ್ ಪೊಲೀಸ್ ಸ್ಟಾಟ್, ಮಾಂಟೆಕಾ ಪೊಲೀಸ್ ಕ್ವಾಟ್, ಸ್ಟಾನಿಸ್ಲಾಸ್ ಕೌಂಟಿ ಶೆರಿಫ್ ಸ್ವಾಟ್ ಮತ್ತು ಎಫ್‌ಬಿಐ ಸ್ವಾಟ್ ಸೇರಿ 5 ತನಿಖಾ ತಂಡಗಳು ಸೇರಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 8 ಖಲಿಸ್ತಾನಿ ಉಗ್ರರನ್ನು ಬಂಧಿಸಲಾಗಿತ್ತು
ಭಾರೀ ಶಸ್ತ್ರಾಸ್ತ್ರ ವಶ
ಬಂಧಿತ ಖಲಿಸ್ತಾನಿ ಉಗ್ರರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಎಫ್ ಬಿ ಐ ವಶಪಡಿಸಿಕೊಂಡಿದೆ. ಎಫ್‌ಬಿಐ ವಶಪಡಿಸಿಕೊಂಡಿರುವ : ಸಾಸ್ತ್ರಗಳಲ್ಲಿ 5 ಹ್ಯಾಂಡ್ ಗನ್ಸ್, ಅಸಾಲ್ಸ್ ರೈಫಲ್, 100ಕ್ಕೂ ಹೆಚ್ಚು ಸುತ್ತು ಮದ್ದು ಗುಂಡು, ಹೈಪಾಸಿಟಿ ಮ್ಯಾಗಜೀನ್ ರೈಫಲ್ ಒಳಗೊಂಡಿವೆ.ಶಸ್ತ್ರಾಸ್ತ್ರಗಳನ್ನು ಮಾತ್ರವಲ್ಲದೆ ಬಂಧನದ ವೇಳೆ 1 409 ಡಾಲರ್ ನಗದು ಮೊತ್ತವನ್ನು ಎಫ್‌ಬಿಐ ವಶವಡಿಸಿದೆ.

