Home » ಇಸ್ಕಾನ್‌ ಅರ್ಚಕ ವಿರುದ್ದ ಭಯೋತ್ಪಾದನೆ ಕೇಸ್
 

ಇಸ್ಕಾನ್‌ ಅರ್ಚಕ ವಿರುದ್ದ ಭಯೋತ್ಪಾದನೆ ಕೇಸ್

by Kundapur Xpress
Spread the love

ನವದೆಹಲಿ : ಹಿಂದೂಗಳ ಮೇಲೆ ದೌರ್ಜನ್ಯದ ವಿರುದ್ದ ಧ್ವನಿ ಎತ್ತಿದ ಕಾರಣಕ್ಕೆ ಸೋಮವಾರ ಬಾಂಗ್ಲಾದೇಶದಲ್ಲಿ ಬಂಧನಕ್ಕೆ ಒಳಗಾಗಿದ್ದ ಹಿಂದೂ ಮುಖಂಡ ಹಾಗೂ ಇಸ್ಕಾನ್ ಸದಸ್ಯ ಚಿನ್ಮಯ ಕೃಷ್ಣದಾಸ ಬ್ರಹ್ಮಚಾರಿ ಅವರ ವಿರುದ್ಧ ಪೊಲೀಸರು ಭಯೋತ್ಪಾದನೆ ಮತ್ತು ದೇಶದ್ರೋಹದ ಕೇಸು ಹೊರಿಸಿದ್ದಾರೆ.

ಹೀಗಾಗಿ ಬಂಧನದ ಪ್ರಕರಣದಲ್ಲಿ ಕೃಷ್ಣ ದಾಸ್ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕರಿಸಿರುವ ಚಿತ್ತಗಾಂಗ್‌ನ ನ್ಯಾಯಾಲಯ ಅವರನ್ನು ಜೈಲಿಗೆ ಕಳುಹಿಸಿದೆ

ಬಂಧನ ವಿರೋಧಿಸಿ ಕೃಷ್ಣಭಕ್ತರು ನ್ಯಾಯಾಲಯದ ಹೊರಗೆ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು’ ಹಿಂದೂ ಕಾರ್ಯಕರ್ತರ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದಾರೆ.

ಈ ನಡುವೆ ಚಿನ್ಮಯ ಕೃಷ್ಣ ದಾಸ್ ಬಂಧನ ಮತ್ತು ಜಾಮೀನು ನಿರಾಕರಣೆಗೆ ಭಾರತ ಮಂಗಳವಾರ ತೀವ್ರ ಕಳವಳ ವ್ಯಕ್ತಪಡಿಸಿದೆ, ಹಿಂದೂಗಳು ಮತ್ತು ಎಲ್ಲಾ ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅಲ್ಲಿನ ಅಧಿಕಾರಿಗಳನ್ನು ಒತ್ತಾಯಿಸಿದೆ

   

Related Articles

error: Content is protected !!