123
ಜಮ್ಮು: ಜಮ್ಮು-ಕಾಶ್ಮೀರದಲ್ಲಿ 2 ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ ಮತ್ತು ಓರ್ವ ಯೋಧ ಹುತಾತ್ಮರಾಗಿದ್ದಾರೆ. ಕಿತ್ತವಾರ್ ಜಿಲ್ಲೆಯಲ್ಲಿ ಜೈಷ್ ಉಗ್ರ ಸಂಘಟನೆಗೆ ಸೇರಿದ ಇಬ್ಬರನ್ನು ಭದ್ರತಾ ಪಡೆ ಹೊಡೆದುರುಳಿಸಿದೆ. ಅತ್ತ ಅನ್ನೂರ್ ಸೆಕ್ಟರ್ ಬಳಿಯ ಗಡಿಯಲ್ಲಿ ಉಗ್ರರೊಂದಿಗಿನ ಕಾದಾಟದ ವೇಳೆ ಸೇನೆಯ ಕಿರಿಯ ಅಧಿಕಾರಿ, ಪಂಜಾಬ್ ರೆಜಿಮೆಂಟ್‌ನ ಸುಬೇದಾರ್ ಕುಲದೀಪ್ ಚಂದ್ ಹುತಾತ್ಮರಾಗಿದ್ದಾರೆ. ಉಗ್ರರು ಚಕಮಕಿಯ ಬಳಿಕ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಪಲಾಯಗೈದಿದ್ದಾರೆ.

