ಹೊಸದಿಲ್ಲಿ: ಮುಂಬರುವ 2025ರ ಮಹಾಕುಂಭ ಮೇಳವು ವಿಕತೆಯ ಮಹಾಕುಂಭವೆಂದು ಬಣ್ಣಿಸಿದ ಪ್ರಧಾನಿ ನರೇಂದ್ರ ಮೋದಿ, ಸಮಾಜವನ್ನು ದ್ವೇಷ ಮತ್ತು ಒಡಕಿನಿಂದ ಮುಕ್ತಗೊಳಿಸುವ ದೃಢ ಸಂಕಲ್ಪಧಾರಿಗಳಾಗೋಣ ಎಂದು ಜನತೆಗೆ ಕರೆ ನೀಡಿದರು.
ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಕುಂಭ ಮೇಳದಲ್ಲಿ ಎಲ್ಲೂ ಬಡವ ಬಲ್ಲಿದನೆಂಬ ಭೇದಕ್ಕೆ ಜಾಗವಿಲ್ಲ. ಹಾಗಾಗೇ ನಮ್ಮ ಕುಂಭಮೇಳವು ಏಕತೆಯ ಮಹಾಕುಂಭವೆನಿಸಲಿದೆ. ಎಂದು ತಿಳಿಸಿದರು.
ಭಕ್ತರು ಸರಕಾರದ ಮಂಜೂರಾತಿ ಪಡೆದ ಟೂರ್ ಪ್ಯಾಕೇಜ್ ಗಳು ವಸತಿ ಸೌಲಭ್ಯ ಮತ್ತು ಹೋಂ ಸ್ಟೇಗಳ ಬಗ್ಗೆ ತಮ್ಮ ಮೊಬೈಲ್ಗಳಲ್ಲೇ ಮಾಹಿತಿ ಪಡೆಯಬಹುದು. ಮಹಾಕುಂಭ ಮೇಳ ನಡೆಯುವ ಇಡೀ ಪ್ರದೇಶದಲ್ಲಿ ಎಐ ಆಧಾರಿತ ಕ್ಯಾಮರಾಗಳ ಕಣ್ಣಾವಲಿರುವುದು. ಭಕ್ತರ ಕುಟುಂಬದ ಯಾರೇ ಮಕ್ಕಳು ಅಥವಾ ಸದಸ್ಯರು ಅಕಸ್ಮಾತ್ ತಪ್ಪಿಬಿಟ್ಟರೂ ಅವರ ಪತ್ತೆಗೆ ಈ ಕ್ಯಾಮರಾಗಳು ನೆರವಾಗಲಿವೆ ಎಂದರು.