Home » ಮಹಾಕುಂಭ : ಆಧ್ಯಾತ್ಮಿಕ ಸಾಂಸ್ಕೃ ತಿಕ ಉತ್ಸವ
 

ಮಹಾಕುಂಭ : ಆಧ್ಯಾತ್ಮಿಕ ಸಾಂಸ್ಕೃ ತಿಕ ಉತ್ಸವ

ರಾಜನಾಥ್‌ ಸಿಂಗ್

by Kundapur Xpress
Spread the love

ಮಹಾಕುಂಭನಗರ : ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಮಹಾ ಕುಂಭಮೇಳಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು. ರಕ್ಷಣಾ ಸಚಿವರು ಭಾರತೀಯತೆಯ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮೆಗಾ ಉತ್ಸವ ಎಂದು ಮಹಾಕುಂಭ ಮೇಳವನ್ನು ಬಣ್ಣಿಸಿದರು.

ಈ ವೇಳೆ ಅವರೊಂದಿಗೆ ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಸಹ ಪ್ರಯಾಗರಾಜ್‌ಗೆ ಭೇಟಿ ನೀಡಿದರು. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾದ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವ ಮೂಲಕ ರಕ್ಷಣಾ ಸಚಿವರು ಮಹಾಕುಂಭ ಯಾತ್ರೆ ಪ್ರಾರಂಭಿಸಿದರು.

 

Related Articles

error: Content is protected !!