118
ಪ್ರಯಾಗರಾಜ್ : ಆರು ವಾರಗಳ ಆಧ್ಯಾತ್ಮಿಕ ಸಂಭ್ರಮದ ಬಳಿಕ, ಮಹಾ ಶಿವರಾತ್ರಿಯಂದು ಅಂತಿಮ ಅಮೃತ ಸ್ನಾನದೊಂದಿಗೆ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ಮಹಾ ಕುಂಭಮೇಳ 2025 ಸಮಾಪನಗೊಂಡಿತು. ಜನವರಿ 13 ರಂದು ಪ್ರಾರಂಭವಾದ ಮೇಳ, ಅಭೂತಪೂರ್ವ 66 ಕೋಟಿಗೂ ಹೆಚ್ಚು ಭಕ್ತರ ಆಗಮನವನ್ನು ಕಂಡಿದೆ. ವಿಶ್ವದ ಅತೀ ದೊಡ್ಡ ಧಾರ್ಮಿಕ ಸಂಗಮ ಈ ಮೂಲಕ ಹೊಸ ದಾಖಲೆ ನಿರ್ಮಿಸಿದೆ
ಮಹಾಕುಂಭನಗರ: ಭೂಮಿಯ ಬೃಹತ್ ಧಾರ್ಮಿಕ ಮೇಳ ಖ್ಯಾತಿಯ 45ದಿನಗಳ ಮಹಾ ಕುಂಭ ಮೇಳವು ಮಹಾಶಿವರಾತ್ರಿಯಂದು ಅಂದರೆ ಬುಧವಾರ ಸಮಾಪನಗೊಂಡಿ ದೆ. ದೇಶದ ಮೂಲೆಮೂಲೆಗಳ ಕೋಟ್ಯಂತರ ಜನರು ಹರ ಹರ ಮಹಾದೇವ ಎಂದು ಸ್ತುತಿಸುತ್ತಾ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ಪ್ರಯಾಗ್‌ರಾಜ್‌ನಲ್ಲಿ ಜ.13ರ ಪೌಷ ಪೂರ್ಣಿಮೆಯಂದು ವಿಧ್ಯುಕ್ತವಾಗಿ ಚಾಲನೆ ಪಡೆದ ಮಹಾಕುಂಭಮೇಳದಲ್ಲಿ ಈ ಬಾರಿ ಇದುವರೆಗೆ ಬರೋಬ್ಬರಿ 66 ಕೋಟಿ ಭಕ್ತರು ಪಾಲ್ಗೊಂಡಿದ್ದಾರೆ.

