Home » ಮೋದಿಗೆ ಕುವೈತ್‌ನ ಅತ್ಯುನ್ನತ ಗೌರವ ಪುರಸ್ಕಾರ
 

ಮೋದಿಗೆ ಕುವೈತ್‌ನ ಅತ್ಯುನ್ನತ ಗೌರವ ಪುರಸ್ಕಾರ

by Kundapur Xpress
Spread the love

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕುವೈತ್‌ನ ಅತ್ಯುನ್ನತ ಗೌರವ ‘ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್’ ಸ್ವೀಕರಿಸಿದರು. ಇದು ಪ್ರಧಾನಿ ಮೋದಿಯವರಿಗೆ ದೇಶವೊಂದು ನೀಡಿದ 20ನೇ ಅಂತಾರಾಷ್ಟ್ರೀಯ ಗೌರವವಾಗಿದೆ.

‘ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್’ ಕುವೈತ್‌ನ ನೈಟ್‌ಹುಡ್ ಆರ್ಡರ್ ಆಗಿದೆ. ಇದನ್ನು ರಾಷ್ಟ್ರದ ಮುಖ್ಯಸ್ಥರು, ವಿದೇಶಿ ಸಾರ್ವಭೌಮರು ಮತ್ತು ವಿದೇಶಿ ರಾಜಮನೆತನದ ಸದಸ್ಯರಿಗೆ ಸ್ನೇಹದ ಸಂಕೇತವಾಗಿ ನೀಡಲಾಗುತ್ತದೆ.

ಇದನ್ನು ಹಿಂದೆ ಬಿಲ್ ಕ್ಲಿಂಟನ್, ಪ್ರಿನ್ಸ್ ಚಾರ್ಲ್ಸ್ ಮತ್ತು ಜಾರ್ಜ್ ಬುಷ್‌ರಂತಹ ನಾಯಕರಿಗೆ ನೀಡಲಾಗಿದೆ. ಕುವೈತ್‌ನ ಬಯಾನ್‌ ಪ್ಯಾಲೇಸ್‌ನಲ್ಲಿ ಪ್ರಧಾನಿ ಮೋದಿಯವರಿಗೆ ಗೌರವ ರಕ್ಷೆಯನ್ನು ನೀಡಲಾಯಿತು. ಕುವೈತ್‌ನ ಅಮೀ‌ರ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್ ಸಬಾಹ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್‌ ಅಲ್-ಸಬಾಹ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಅವರು ಗಲ್ಫ್ ರಾಷ್ಟ್ರಕ್ಕೆ ಎರಡು ದಿನಗಳ ಭೇಟಿ ನೀಡಿದ್ದಾರೆ. 43 ವರ್ಷಗಳ ಬಳಿಕ ಕುವೈತ್‌ಗೆ ಭಾರತದ ಪ್ರಧಾನಿಯೊಬ್ಬರು ನೀಡಿದ ಮೊದಲ ಭೇಟಿ ಇದಾಗಿದೆ.

 

Related Articles

error: Content is protected !!