ನವದೆಹಲಿ: ಇಂದಿನಿಂದ ದೇಶದಲ್ಲಿ ಜಿಎಸ್‌ಟಿ ಉಳಿತಾಯ ಉತ್ಸವ ಆರಂಭವಾಗುತ್ತಿದೆ, ಹಬ್ಬದ ಋತುವಿನಲ್ಲಿ ಬಾಯಿ ಸಿಹಿಯಾಗಲಿದೆ. ಇದರೊಂದಿಗೆ ದೇಶದ ಜನರು ಸ್ವದೇಶಿ ವಸ್ತುಗಳನ್ನು ಖರೀದಿ ಆತ್ಮನಿರ್ಭರ ಭಾರತವನ್ನು ಮಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.ವಸ್ತುಗಳ ಜಿಎಸ್‌ಟಿ ದರ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ನಿನ್ನೆ ಸಂಜೆ 5 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಿದರು.
ಸ್ವದೇಶಿ ಚಳುವಳಿಯಿಂದ ಸ್ವಾತಂತ್ರ್ಯ ಸಿಕ್ಕಿದೆ ಸ್ವದೇಶಿ ಮಂತ್ರದಿಂದಲೇ ದೇಶದ ಅಭಿವೃದ್ಧಿ ಸಾಧ್ಯ. ಪ್ರತಿಯೊಬ್ಬರು ಸ್ವದೇಶಿ ವಸ್ತುಗಳನ್ನು ಹೆಮ್ಮೆಯಿಂದ ಖರೀದಿಸಬೇಕು. ಪ್ರತಿ ಮನೆಯನ್ನೂ ಸ್ವದೇಶಿ ಪ್ರತೀಕ ಮಾಡಬೇಕು. ಪ್ರತಿ ಅಂಗಡಿಯನ್ನು ಸ್ವದೇಶಿ ವಸ್ತುಗಳಿಂದ ಅಲಂಕರಿಸಬೇಕು ಎಂದರು
ರಾಜ್ಯಗಳು ಸ್ವದೇಶಿ ವಸ್ತುಗಳ ಉತ್ಪಾದನೆಗೆ ವೇಗ ನೀಡಬೇಕು. ಹೂಡಿಕೆ ವಾತಾವರಣ ಸೃಷ್ಟಿಸಬೇಕು. ಇದರಿಂದ ಪ್ರತಿಯೊಂದು ರಾಜ್ಯ ಹಾಗೂ ದೇಶ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.
ನಾಗರಿಕ ದೇವೋ ಭವ ಮಂತ್ರದೊಂದಿಗೆ ಮುಂದುವರಿಯುತ್ತಿದ್ದೇವೆ. ಈ ನಿರ್ಧಾರದಿಂದ ಜನರಿಗೆ 2.5 ಲಕ್ಷ ರೂಪಾಯಿ ಉಳಿತಾಯವಾಗಲಿದೆ. ವಿಕಸಿತ್ ಭಾರತ ಕನಸು ತಲುಪಲು ಆತ್ಮ ಭಾರತ್ ಹಾದಿಯಲ್ಲಿ ನಡೆಯಬೇಕಿದೆ ಎಂದರು.

