ಲಖನೌ : ಹಿಂದು ಮಹಿಳೆಯರನ್ನು ಮತಾಂತರ ಮಾಡಿ ಲವ್ ಜಿಹಾದ್ ನಡೆಸಲು 1000 ಮುಸ್ಲಿಂ ಯುವಕರನ್ನು ಸ್ವಯಂಘೋಷಿತ ದೇವಮಾನವ ಜಮಾಲುದ್ದಿನ್ ಅಲಿಯಾಸ್, ಛಂಗೂರ್ ಬಾಬಾ ನೇಮಿಸಿಕೊಂಡಿದ್ದ. ಅದಕ್ಕಾಗಿ ಮುಸ್ಲಿಂ ರಾಷ್ಟ್ರಗಳಿಂದ 3 ವರ್ಷದಲ್ಲಿ 500 ಕೋಟಿ ರೂಪಾಯಿಗಳನ್ನು ಸಹ ಪಡೆದಿದ್ದ ಎಂಬ ಸ್ಪೋಟಕ ವಿಷಯ ತನಿಖೆಯಿಂದ ಬೆಳಕಿಗೆ ಬಂದಿದೆ.
ಈ ಯುವಕರನ್ನು ಬಳಸಿ ಕೊಂಡು ಯುವತಿಯರು, ಬಡ ಕುಟುಂಬ ಮಹಿಳೆಯರು, ವಿದವೆಯರನ್ನು ಭಂಗೂರ್ ಗುರಿ ಮಾಡುತ್ತಿದ್ದ. ಅವರಿಗೆ ಪ್ರೇಮ, ವಿವಾಹ, ಮನೆ ಎಂಬ ಆಸೆಗಳನ್ನು ತೋರಿಸಿ, ಅವರನ್ನು ಮತಾಂತರ ಮಾಡುತ್ತಿದ್ದ. ಇನ್ನು ಕೆಲ ಸಂದರ್ಭಗಳಲ್ಲಿ ಬಲವಂತವಾಗಿ ಮತಾಂತರಿಸುತ್ತಿದ್ದ.ಉಗ್ರ ಚಟುವಟಿಕೆ ನಡೆಸುತ್ತಿರುವವರು ಸೇರಿದಂತೆ ಒಂದು ಕೋಮಿನ ಜನರ ಜತೆ ಅವರ ಮದುವೆ ಮಾಡಲು ಯತ್ನಿಸಿದ್ದ ಎಂದು ಇತ್ತೀಚೆಗೆ ಬಾಬಾನನ್ನು ಬಂಧಿಸಿದ್ದ ಎಸ್‌ಐಟಿ ಮೂಲಗಳು ತಿಳಿಸಿವೆ. ಈ ಕೆಲಸ ಮಾಡಿದ್ದಕ್ಕಾಗಿ ಯುವಕರಿಗೆ ಇಂಡೋ ನೇಪಾಳ ಗಡಿ ಭಾಗದಲ್ಲಿ ಹಣ ಪಾವತಿ ಮಾಡುತ್ತಿದ್ದ. ಇದಕ್ಕೆ ಸಂಬಂಧಿಸಿದಂತೆ ಐಬಿ ಮತ್ತು ಎನ್‌ಐಎಗಳು ಛಂಗೂರ್ ಬಾಬಾನನ್ನು ವಿಚಾರಣೆ ನಡೆಸಲಿವೆ ಎಂದು ಗೊತ್ತಾಗಿದೆ.

