Home » ಮಹಾ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ
 

ಮಹಾ ಕುಂಭಮೇಳಕ್ಕೆ ವಿದ್ಯುಕ್ತ ಚಾಲನೆ

ಮೊದಲ ದಿನ 1.5 ಕೋಟಿ ಭಕ್ತರಿಂದ ಸ್ನಾನ

by Kundapur Xpress
Spread the love

ಮಹಾಕುಂಭ ನಗರ : ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ, ವಿಶ್ವದ ಅತಿ ದೊಡ್ಡ ಧಾರ್ಮಿಕ ಸಮಾಗಮ ಎಂದೇ ಬಿಂಬಿತ ಪವಿತ್ರ ಕುಂಭಮೇಳಕ್ಕೆ ಸೋಮವಾರ ಉತ್ತರಪ್ರದೇಶದ ಪ್ರಯಾಗ್‌ರಾಜ್ ನಲ್ಲಿ ಚಾಲನೆ ಸಿಕ್ಕಿದೆ  ಗಂಗೆ, ಯಮುನೆ ಮತ್ತು ಸರಸ್ವತಿ ನದಿಗಳ ಸಂಗಮ ಸ್ಥಳದಲ್ಲೇ ಮೊದಲ ದಿನವೇ 1.5 ಕೋಟಿ ಭಕ್ತರು ಪುಣ್ಯಸ್ನಾನ ಮಾಡಿದರು

ಶಂಖ, ಭಜನೆಗಳ ಮೂಲಕ ಪೌಷ ಪೂರ್ಣಿಮಾ’ ಕಾರ್ಯಕ್ರಮದೊಂದಿಗೆ ಮೇಳಕ್ಕೆ ಚಾಲನೆ ದೊರಕಿದೆ. 45 ದಿನ ನಡೆಯುವ ಈ ಧಾರ್ಮಿಕ ಹಬ್ಬಕ್ಕೆ ಈಗಾಗಲೇ ದೇಶ-ವಿದೇಶಗಳಿಂದ ಭಕ್ತರು ಆಗಮಿಸಿದ್ದು, ಒಟ್ಟು 40 ಕೋಟಿಗೂ ಆಧಿಕ ಜನರು ಭೇಟಿಯ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಈ ಬಾರಿ ಮಹಾಕುಂಭದಲ್ಲಿ ದೇಶದ ವಿವಿಧ ಭಾಗಳ 13 ಅಖಾಡಗಳು ಭಾಗವಹಿಸಿವೆ. ಮೇಳಕ್ಕೆ ಬರುವ ಕೋಟ್ಯಂತರ ಭಕ್ತರಿಗೆ ಕಿಂಚಿತ್ತು ಲೋಪವಾಗಬಾರದು ಎನ್ನುವ ಕಾರಣಕ್ಕೆ ಅಚ್ಚು ಕಟ್ಟಾಗಿ ಸರ್ಕಾರ ಕಾರ್ಯಕ್ರಮ ಆಯೋಜಿಸಿದೆ

 

Related Articles

error: Content is protected !!