ಇಸ್ಲಾಮಾಬಾದ್ : ಭಾರತೀಯ ನೌಕಾ ಸೇನೆಯ ಮಾಜಿ ನೌಕಾಧಿಕಾರಿ, ಸದ್ಯ ಪಾಕಿಸ್ತಾನದ ಜೈಲಿನಲ್ಲಿರುವ ಕುಲಭೂಷಣ್ ಜಾಧವ್ ಅವರನ್ನು ಇರಾನಿನಿಂದ ಅಪಹರಿಸಲು ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐಗೆ ನೆರವಾಗಿದ್ದ ಉಗ್ರ ಹಾಗೂ ‘ಇಸ್ಲಾಂ ಪಂಡಿತ’ ಮುಪ್ತಿ ಷಾ ಮೀರ್‌ನನ್ನು ಅಪರಿಚಿತ ವ್ಯಕ್ತಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಹಿಂಸಾಚಾರ ಪೀಡಿತ ಬಲೂಚಿಸ್ತಾನದ ಕೆಚ್ ಎಂಬಲ್ಲಿ ಈ ಘಟನೆ ನಡೆದಿದೆ
ರಾತ್ರಿ ಪ್ರಾರ್ಥನೆ ಮುಗಿಸಿ ಮಸೀದಿಯಿಂದ ಹೊರಬರುತ್ತಿದ್ದಾಗ ಬೈಕ್‌ನಲ್ಲಿ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ನಂತರ ಮುಪ್ತಿಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಪಾಕಿಸ್ತಾನದ ಮೂಲಭೂತವಾದಿ ಪಕ್ಷವಾದ ಜಮೈತ್ ಉಲೇಮಾ ಇಸ್ಲಾಂ (ಜೆಯುಐ) ಸದಸ್ಯನೂ ಆಗಿದ್ದ ಮುಪ್ತಿ, ವಿದ್ವಾಂಸ ಎಂದು ಹೇಳಿಕೊಂಡು ಮಾವನ ಕಳ್ಳಸಾಗಣೆ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ನಿರತನಾಗಿದ್ದ. ಐಎಸ್‌ಐ ಜತೆಗೆ ನಿಕಟ ಸಂಪರ್ಕ ಹೊಂದಿದ್ದ ಈತ ಆಗಾಗ್ಗೆ ಪಾಕ್‌ನ ಉಗ್ರ ತರಬೇತಿ ಕೇಂದ್ರಗಳಿಗೆ ಭೇಟಿ ನೀಡಿ ಭಾರತದೊಳಗೆ ಉಗ್ರರ ನುಸುಳುವಿಕೆಗೆ ನೆರವು ನೀಡುತ್ತಿದ್ದ.

