ರಾಂಚಿ : ಒಂದು ಕಡೆ ಉಚಿತ ಗ್ಯಾರಂಟಿ ಭರವಸೆಗಳ ಬಗ್ಗೆ ಬಿಜೆಪಿ-ಕಾಂಗ್ರೆಸ್ ನಡುವೆ ಮಾತಿನ ಸಂಘರ್ಷ ನಡೆದಿದ್ದರೂ ಜಾರ್ಖಂಡ್ ವಿಧಾನಸಭಾ ಚುನಾವಣೆ ನಿಮಿತ್ತ, ಬಿಜೆಪಿ ಭರ್ಜರಿ ಉಚಿತ ಕೊಡುಗೆಗಳ ಪ್ರಣಾಳಿಕೆ ಘೋಷಿಸಿದೆ.
ಮಹಿಳೆಯರಿಗೆ ಕರ್ನಾಟಕ ರೀತಿ ಗೃಹಲಕ್ಷ್ಮಿ ಥರದ ಮಾಸಿಕ 2100 ರು. ಭತ್ಯೆ, ವಾರ್ಷಿಕ 2 ಉಚಿತ ಎಲ್ಪಿಜಿ ಸಿಲಿಂಡರ್, ಉಳಿದ ವೇಳೆ 500 ರು.ಗೆ ಎಲ್ಪಿಜಿ, 5 ಲಕ್ಷ ಸ್ವಯಂ ಉದ್ಯೋಗ ‘ಸೃಷ್ಟಿ, ಗೃಹ ಜ್ಯೋತಿ ರೀತಿ ಮಾಸಿಕ 300 ಯೂನಿಟ್ ಉಚಿತ ವಿದ್ಯುತ್, 2.87 ಲಕ್ಷ ಸರ್ಕಾರಿ ಹುದ್ದೆ ಭರ್ತಿ ಇವು ಪ್ರಮುಖ ಭರವಸೆಗಳು