Home » ಉಗ್ರವಾದ ನಿಲ್ಲಿಸದಿದ್ದರೆ ಪಾಕಿಸ್ತಾನಕ್ಕೆ ನುಗ್ಗಿ ದಾಳಿ
 

ಉಗ್ರವಾದ ನಿಲ್ಲಿಸದಿದ್ದರೆ ಪಾಕಿಸ್ತಾನಕ್ಕೆ ನುಗ್ಗಿ ದಾಳಿ

ಸಚಿವ ಜೈಶಂಕರ್

by Kundapur Xpress
Spread the love

ಹೊಸದಿಲ್ಲಿ : ಭಯೋತ್ಪಾದಕರನ್ನು ಪೋಷಿಸುವುದು ನಿಲ್ಲಿಸದಿದ್ದರೆ ಪಾಕಿಸ್ತಾನವನ್ನು ಗುರಿಯಾಗಿಸುವುದನ್ನು ಭಾರತ ನಿಲ್ಲಿಸುವುದಿಲ್ಲ. ಭಯೋತ್ಪಾದಕರು ಎಲ್ಲೇ ಅಡಗಿದ್ದರೂ ಸರಿ, ಪಾಕಿಸ್ತಾನದೊಳಗೆ ಅವಿತಿದ್ದರೂ ಅಲ್ಲಿಗೆ ನುಗ್ಗಿ ದಾಳಿ ಮಾಡಿ ಹೊಡೆಯಲು ಸಿದ್ಧರಿದ್ದೇವೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.

ಒಂದು ವಾರದ ಬೆಲ್ಲಿಯಂ ಮತ್ತು ಫ್ರಾನ್ಸ್ ಪ್ರವಾಸದಲ್ಲಿರುವ ವಿದೇಶಾಂಗ ಸಚಿವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಭಯೋತ್ಪಾದಕರಿಗೂ ಪಾಕ್‌ಗೂ ಸ್ಪಷ್ಟ ಮಾತುಗಳಲ್ಲಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಆಪರೇಷನ್ ಸಿಂದೂರ್ ವೇಳೆ ಭಾರತದ ಯುದ್ಧ ವಿಮಾನಗಳು ನಾಶವಾದ ವದಂತಿಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್, ನಾಶಗೊಂಡ ಮತ್ತು ಕೆಲಸಕ್ಕೆ ಬಾರದ ಸ್ಥಿತಿಯಲ್ಲಿರುವ ಪಾಕ್ ವಾಯುನೆಲೆಗಳು ರಫೆಲ್ ಮತ್ತು ವಾಯುಪಡೆ ದಾಳಿ ಕಾರ್ಯಕ್ಷಮತೆಗೆ ಸಾಕ್ಷಿ. 8 ಪಾಕ್ ವಾಯುನೆಲೆಗಳ ಮೇಲೆ ದಾಳಿ. ಮಾಡಿದ್ದೊಂದೇ ಪಾಕ್ ದಾಳಿ ನಿಲ್ಲಲು ಕಾರಣ ಎಂದಿದ್ದಾರೆ

 

Related Articles

error: Content is protected !!