Home » ಭಾರತಕ್ಕೆ ಚೀನಾ ಕೃತಜ್ಞತೆ
 

ಭಾರತಕ್ಕೆ ಚೀನಾ ಕೃತಜ್ಞತೆ

by Kundapur Xpress
Spread the love

ಹೊಸದಿಲ್ಲಿ : ಕೊಲಂಬೊದಿಂದ ನವಾಶೇವಾಗೆ ಸಾಗುತ್ತಿದ್ದಾಗ ಬೆಂಕಿ ಹೊತ್ತಿಕೊಂಡಿದ್ದ ಎಂ ವಿ ವಾನ್ ಹೈ 503 ಹಡಗಿನಲ್ಲಿ ಸಿಲುಕಿದ್ದ 14 ಚೀನಾ ಪ್ರಜೆಗಳು ಸೇರಿ 22 ಸಿಬ್ಬಂದಿಯನ್ನು ರಕ್ಷಿಸಿದ್ದಕ್ಕಾಗಿ ಭಾರತಕ್ಕೆ ಚೀನಾ ಕೃತಜ್ಞತೆ ಸಲ್ಲಿಸಿದೆ.

ಅಗ್ನಿ ಅವಘಡದಲ್ಲಿ ಸಿಲುಕಿದವರನ್ನು ರಕ್ಷಿಸುವಲ್ಲಿ ಭಾರತೀಯ ನೌಕಾಪಡೆ ನಡೆಸಿದ ತ್ವರಿತ ಮತ್ತು ವೃತ್ತಿಪರ ರಕ್ಷಣಾ ಕಾರ್ಯಾಚರಣೆಗೆ ಭಾರತದಲ್ಲಿನ ಚೀನಾ ರಾಯಭಾರ ಕಚೇರಿಯ ವಕ್ತಾರರು ಮಂಗಳವಾರ ಕೃತಜ್ಞತೆ ಸಲ್ಲಿಸಿದ್ದಾರೆ.

ಸಿಂಗಾಪುರ ಧ್ವಜವಿದ್ದ ಕಂಟೇನರ್ ಹಡಗಿನಲ್ಲಿದ್ದ 14 ಮಂದಿ ಚೀನಿಯರು ಹಾಗೂ 6 ಮಂದಿ ತೈವಾನ್‌ನವರು ಸೇರಿ 22 ಸಿಬ್ಬಂದಿ ಇದ್ದರು ಎಂದು ಚೀನಾ ರಾಯಭಾರ ಕಚೇರಿ ವಕ್ತಾರೆ ಯು ಜಿಂಗ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

 

Related Articles

error: Content is protected !!