ಅಯೋಧ್ಯೆ: ಜನ್ಮಭೂಮಿ ರಾಮಮಂದಿರ ಮತ್ತು ಆವರಣದಲ್ಲಿ ಮೊಬೈಲ್ ಫೋನ್‌ಗಳಿಗೆ ಸಂಪೂರ್ಣ ನಿಷೇಧ ಹೇರಿ ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತೀರ್ಮಾನಿಸಿದೆ.
ಟ್ರಸ್ಟ್‌ನ ವಿಶ್ವಸ್ತ್ರ ಡಾ. ಅನಿಲ್ ಮಿಶ್ರಾ ಈ ಕುರಿತು ಮಾಹಿತಿ ನೀಡಿದ್ದು, ಈ ಬಗ್ಗೆ ಜಿಲ್ಲಾಡಳಿತದೊಂದಿಗೆ ಟ್ರಸ್ಟ್‌ನ ಸಭೆ ನಡೆದಿದೆ. ಈ ಸಭೆಯಲ್ಲಿ ಭಕ್ತರ ಸುರಕ್ಷತೆ ಮತ್ತು ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತ ಮತ್ತು ಟ್ರಸ್ಟ್ ಒಟ್ಟಾಗಿ ಫೋನ್ ಕೊಂಡೊಯ್ಯುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ ಎಂದು ಹೇಳಿದ್ದಾರೆ. ಜ.22ರಂದು ರಾಮಲಲಾನ ಪ್ರಾಣ ಪ್ರತಿಷ್ಠೆಯ ನಂತರ ಮೇ 24ರವರೆಗೆ ಜನ್ಮಭೂಮಿ ರಾಮ ಮಂದಿರದಲ್ಲಿ ಮೊಬೈಲ್ ಫೋನ್‌ಗಳಿಗೆ ಆವಕಾಶವಿತ್ತು. ನಿಷೇಧವೆಂದು ಹೇಳಿದ್ದರೂ ಅನೇಕರು ತಮ್ಮ ಫೋನ್ಗಳೊಂದಿಗೆ ಮಂದಿರ ಪ್ರವೇಶಿಸಿ, ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದರು. ಇದರಿಂದ ಇತರ ಭಕ್ತರಿಗೆ ದೇವರ ದರ್ಶನಕ್ಕೆ ತೊಡಕಾಗುತ್ತಿತ್ತು. ಇದನ್ನು ಗಮಿಸಿದ ಟ್ರಸ್ಟ್ ಈಗ ಈ ನಿರ್ಧಾರಕ್ಕೆ ಬಂದಿದೆ.