Home » ಫೆ.12ರಿಂದ ಮೋದಿ ಅಮೆರಿಕ ಪ್ರವಾಸ ?
 

ಫೆ.12ರಿಂದ ಮೋದಿ ಅಮೆರಿಕ ಪ್ರವಾಸ ?

by Kundapur Xpress
Spread the love

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿಗೆ ಹೆಚ್ಚು ಕಡಿಮೆ ಸಮಯ ನಿಗದಿಯಾಗಿದ್ದು, ಫೆ.13ರಂದು ಇವರಿಬ್ಬರ ಮುಖಾಮುಖಿ ಯಾಗಲಿದೆ. ಫ್ರಾನ್ಸ್‌ನಿಂದ ನೇರವಾಗಿ ಫೆ.12ರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ವಾಷಿಂಗ್ಟನ್ ಡಿಸಿಗೆ ತೆರಳುವ ಸಾಧ್ಯತೆ ಇದೆ. ಫೆ.13ರಂದು ಟ್ರಂಟ್ ಅವರು ಔತಣ ಕೂಟ ಆಯೋಜಿಸಲಿದ್ದಾರೆ ಎಂದು ಮೂಲಗಳು ಹೇಳಿವೆ. ಅದೇ ದಿನ ಇವರಿಬ್ಬರ ನಡುವೆ ಮಾತುಕತೆ ನಡೆಯಲಿದೆ.

ಫೆ.14ರ ವರೆಗೆ ಮೋದಿ ಅವರು ಅಮೆರಿಕದಲ್ಲೇ ಉಳಿಯಲಿದ್ದಾರೆ. ಅಲ್ಲಿನ ಕಾರ್ಪೊರೇಟ್ ನಾಯಕರು ಮತ್ತು ಭಾರತೀಯ ಸಮುದಾಯದವರ ಭೇಟಿ ಕಾರ್ಯಕ್ರಮ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಕಳೆದ ಸೋಮವಾರ ಅಧಿಕಾರ ವಹಿಸಿ ಕೊಂಡ ನಂತರ ಟ್ರಂಪ್ ಅವರು, ಫೆಬ್ರವರಿಯಲ್ಲಿ ಮೋದಿ ಭೇಟಿ ಮಾಡುವ ಬಗ್ಗೆ ಸುಳಿವು ನೀಡಿದ್ದರು. ಭಾರತವು ಅಮೆರಿಕದಿಂದ ರಕ್ಷಣೆಗೆ ಸಂಬಂಧಿಸಿದ ಉಪಕರಣಗಳನ್ನು ಖರೀದಿ ಮಾಡುವ ಬಗ್ಗೆ ಟ್ರಂಪ್ ಅವರು ಈ ಮಾತುಕತೆ ವೇಳೆ ಉಲ್ಲೇಖಿಸುವ ಸಾಧ್ಯತೆಗಳಿವೆ.

 

Related Articles

error: Content is protected !!