Home » 11 ವರ್ಷಗಳಲ್ಲಿ ಭಾರಿ ಪರಿವರ್ತನೆ : ಸಾಧನೆ ಬಗ್ಗೆ ಮೋದಿ ಬಣ್ಣನೆ
 

11 ವರ್ಷಗಳಲ್ಲಿ ಭಾರಿ ಪರಿವರ್ತನೆ : ಸಾಧನೆ ಬಗ್ಗೆ ಮೋದಿ ಬಣ್ಣನೆ

by Kundapur Xpress
Spread the love

ನವದೆಹಲಿ : ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದು 11 ವರ್ಷವಾಗಿರುವ ಮತ್ತು ತಾವು 3ನೇ ಬಾರಿ ಪ್ರಧಾನಿಯಾಗಿ 1 ವರ್ಷ ಕಳೆದಿರುವ ಹೊತ್ತಿನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರದ ಹಲವು ಸಾಧನೆಗಳನ್ನು ಪಟ್ಟಿ ಮಾಡಿದ್ದಾರೆ. ‘ಕಳೆದ 11 ವರ್ಷ ಗಳಲ್ಲಿ ದೇಶದ ವಿವಿಧ ಕ್ಷೇತ್ರಗಳಲ್ಲಿ ತ್ವರಿತ ಪರಿವರ್ತನೆಗಳಾಗಿವೆ’ ಎಂದು ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಮೋದಿ, ‘ನಮ್ಮ ಸರ್ಕಾರ * ಅಧಿಕಾರಕ್ಕೇರಿದಾಗಿಂದ ದೇಶವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಜಾಗತಿಕ ಮಟ್ಟದಲ್ಲಿ ಡಿಜಿಟಲ್ ನಾವೀನ್ಯತೆ ಮತ್ತು ಹವಾಮಾನದ ವಿಷಯದಲ್ಲಿ ಪ್ರಮುಖ ದನಿಯಾಗಿದೆ’ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು 2024ರ ಜೂ.9ರಂದು 3ನೇ ಬಾರಿ ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸಿದ್ದರು. ಇದರೊಂದಿಗೆ, ತಮ್ಮ ಸರ್ಕಾರದ 11 ವರ್ಷದ ಸಾಧನೆಗಳನ್ನೊಳಗೊಂಡ ಕಡತವುಳ್ಳ ನಮೋ ಆ್ಯಪ್‌ನ ಲಿಂಕ್ ಅನ್ನೂ ಹಂಚಿಕೊಂಡಿದ್ದಾರೆ

 

Related Articles

error: Content is protected !!