Home » ಅರ್ಜೇಂಟೀನಾದ ಭಾರತೀಯರ ಸ್ವಾಗತಕ್ಕೆ ಮೋದಿ ಸಂತಸ
 

ಅರ್ಜೇಂಟೀನಾದ ಭಾರತೀಯರ ಸ್ವಾಗತಕ್ಕೆ ಮೋದಿ ಸಂತಸ

by Kundapur Xpress
Spread the love

ಬ್ಯೂನಸ್ ಐರಿಸ್ (ಅರ್ಜೆಂಟೀನಾ): ಮೋದಿ…. ಮೋದಿ…. ಜೈಹಿಂದ್, ಭಾರತ್ ಮಾತಾ ಕಿ ಜೈ ಘೋಷಣೆಗಳು ಇಲ್ಲಿ ಮುಗಿಲು ಮುಟ್ಟಿದ್ದವು. ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಾತ್ರಿ ಇಲ್ಲಿನ ಎಲ್ ವೀರ್ ಪ್ಯಾಲೆಸ್ ಹೊಟೇಲ್ ಬಳಿ ಆಗಮಿಸುತ್ತಿದ್ದಂತೆ ಇಲ್ಲಿನ ಭಾರತೀಯ ಸಮುದಾಯ ಅತ್ಯಂತ ಖುಷಿಯಿಂದ ಮತ್ತು ಅಷ್ಟೇ ಸಾಂಪ್ರದಾಯಿಕವಾಗಿ ಸ್ವಾಗತಿಸಿದ ಪರಿಯಿದು

ಭಾರತದ ಸಾಂಪ್ರದಾಯಿಕ ಶಾಸ್ತ್ರೀಯ ನೃತ್ಯ ವೈವಿಧ್ಯ ಸಹಿತ ಭಾರತದ ಸಂಪನ್ನ ಸಾಂಸ್ಕೃ ತಿಕ ಪರಂಪರೆಯನ್ನ ಸಾದರಪಡಿಸುವ ಕಾರ್ಯಕ್ರಮಗಳೂ ಪ್ರಧಾನಿ ಮೋದಿ ಸ್ವಾಗತಾರ್ಹ ನಡೆದವು.

ಅರ್ಜೆಂಟೀನಾದಲ್ಲಿರುವ ಭಾರತೀಯ ವಲಸಿಗರಿಂದ ಆತ್ಮೀಯ ಸ್ವಾಗತ ಪಡೆದಿರುವುದು ನನಗೆ ಗೌರವ ತಂದಿದೆ. ಸಾಂಸ್ಕೃತಿಕ ಸಂಪರ್ಕದ ವಿಷಯದಲ್ಲಿ ದೂರವು ಅಡ್ಡಿಯಾಗುವುದಿಲ್ಲ. ಎಲ್ಲೇ ಇದ್ದರೂ ಭಾರತೀಯರು ತಮ್ಮ ಬೇರುಗಳನ್ನು ಮರೆಯುವುದಿಲ್ಲ ಎಂದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ

ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಮೋದಿ, ಸಾಂಸ್ಕೃ ತಿಕ ಸಂಪರ್ಕದ ವಿಷಯದಲ್ಲಿ ದೂರವು ಅಡ್ಡಿಯಾಗುವುದಿಲ್ಲ. ಬ್ಯೂನಸ್ ಐರಿಸ್‌ನಲ್ಲಿ ಭಾರತೀಯ ಸಮುದಾಯದಿಂದ ದೊರೆತ ಭವ್ಯ ಸ್ವಾಗತದಿಂದ ಗೌರವಿಸಲ್ಪಟ್ಟಿದ್ದೇನೆ. ಮನೆಯಿಂದ ಸಾವಿರಾರು ಕಿಮೀ ದೂರದಲ್ಲಿ ಕೂಡ ನಮ್ಮ ಭಾರತೀಯ ಸಮುದಾಯದ ಮೂಲಕ ಭಾರತದ ಚೈತನ್ಯವು ಹೇಗೆ ಪ್ರಕಾಶಮಾನವಾಗಿ ಹೊಳೆಯುತ್ತದೆ ಎಂಬುದನ್ನು ನೋಡುವುದು ನಿಜವಾಗಿಯೂ ಹೃದಯಸ್ಪರ್ಶಿ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

 

Related Articles

error: Content is protected !!