105
ಇಸ್ಲಾಮಾಬಾದ್ : ವಿಶ್ವದ ಮುಂಚೂಣಿ ಮಾಹಿತಿ ತಂತ್ರಜ್ಞಾನ ಕಂಪನಿಯಾದ ಮೈಕ್ರೋಸಾಫ್ಟ್, ಪಾಕಿಸ್ತಾನದಲ್ಲಿನ ತನ್ನ ಕಚೇರಿಗಳನ್ನು ಮುಚ್ಚಲು ನಿರ್ಧರಿಸಿದೆ. ಕಳೆದ ಕೆಲ ವರ್ಷಗಳಿಂದ ಪಾಕ್‌ನಲ್ಲಿ ತನ್ನ ಕಾರ್ಯಾಚರಣೆ ಮತ್ತು ಸಿಬ್ಬಂದಿ ಕಡಿತ ಮಾಡುತ್ತಲೇ ಬಂದಿದ್ದ ಅಮೆರಿಕ ಕಂಪನಿ ಇದೀಗ ದೇಶಕ್ಕೆ ಗುಡ್‌ಬೈ ಹೇಳಲು ನಿರ್ಧರಿಸಿದೆ.
ಜಾಗತಿಕ ಪುನಾರಚನೆ, ಕ್ಲೌಡ್ ಆಧರಿತ, ಪಾಲುದಾರಿಕೆ ಕಾರಣದಿಂದ ಬದಲಾವಣೆ ಎಂದು ಕಂಪನಿ ಹೇಳಿಕೊಂಡಿದೆಯಾದರೂ ಪಾಕಿಸ್ತಾನದಲ್ಲಿ ಮುಂದುವರೆದ ಆರ್ಥಿಕ ಅಸ್ಥಿರತೆಯಿಂದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

