ಹೊಸದಿಲ್ಲಿ : ಗಗನಯಾತ್ರಿ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಯಶಸ್ವಿಯಾಗಿ ವಾಪಾದ ಬಳಿಕ ದೇಶದ ಮಕ್ಕಳಲ್ಲಿ ಬಾಹ್ಯಾಕಾಶ ಬಗ್ಗೆ ನವ ಕುತೂಹಲದ ಮೂಡಿದೆ ಇಷ್ಟು ಮಾತ್ರವಲ್ಲ, ಬಾಹ್ಯಾಕಾಶ ರಂಗದಲ್ಲೇ 200ಕ್ಕೂ ಅಧಿಕ ಸ್ಟಾರ್ಟ್ ಅಪ್ ಗಳು ಕಾರ್ಯೋನ್ಮುಖವಾಗಿರುವುದು ಗಮನಾರ್ಹ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರೇಡಿಯೋ ಮಾಸಿಕ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಇದನ್ನು ತಿಳಿಸಿದ್ದಾರೆ. ಕಳೆದ ಕೆಲವು ವಾರಗಳಲ್ಲಿ ಕ್ರೀಡಾರಂಗ, ವಿಜ್ಞಾನ ಅಥವಾ ಸಂಸ್ಥೆ ತಿರಂಗಗಳಲ್ಲಿ ಪ್ರತಿಯೋರ್ವ ಭಾರತೀಯ ಹೆಮ್ಮೆ ಪಡುವಂತಹ ಸಾಧನೆಗಳಾಗಿವೆ. ಗಗನಯಾತ್ರಿ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಯಶಸ್ವಿಯಾಗಿ ವಾಪಸ್ಸಾಗುವ ವಿಚಾರವಾಗಿ ಈಚೆಗೆ ದೇಶಾದ್ಯಂತ ತುಂಬು ಕುತೂಹಲ ಕವಿದಿತ್ತು. ಶುಭಾಂಶು ಶುಕ್ಲಾ ಸುರಕ್ಷಿತವಾಗಿ ಭುವಿಗಿಳಿಯುತ್ತಿದ್ದಂತೆ ಜನರು ಖುಷಿಯಿಂದ ಕುಣಿದಾಡಿದ್ದರು. ಪ್ರತಿಯೋರ್ವರ ಹೃದಯಗಳೂ ಸಂತಸದ ಹೊನಲಿಂದ ತೊಯ್ದಾಡಿತ್ತು. ಇಡೀ ದೇಶಕ್ಕೆ ದೇಶ ಹೆಮ್ಮೆಯಿಂದ ತಲೆದೂಗಿತ್ತು.
ಚಿಣ್ಣರ ಹುರುಪು : 2023ರ ಆಗಸ್ಟ್‌ನಲ್ಲಿ ಚಂದ್ರಯಾನ-3 ಯಶಸ್ವಿಯಾದಾಗಲೂ ದೇಶದಲ್ಲಿ ಹೊಸ ಸನ್ನಿವೇಶ ಕವಿದಿತ್ತು. ಮಕ್ಕಳಲ್ಲಿ ವಿಜ್ಞಾನ, ಬಾಹ್ಯಾಕಾಶ ಬಗ್ಗೆ ನವೋತ್ಸಾಹ- ಕುತೂಹಲ ಕವಿದಿದೆ. ಇದೀಗ ನಾವು ಕೂಡ ಬಾಹ್ಯಾಕಾಶಕ್ಕೆ ಯಾನ ಮಾಡುತ್ತೇವೆ, ನಾವೂ ಚಂದ್ರನಂಗಣಕ್ಕೆ ಇಳಿಯುತ್ತೇವೆ, ನಾವೂ ಬಾಹ್ಯಾಕಾಶ ವಿಜ್ಞಾನಿಗಳಾಗುತ್ತೇವೆಂದು ಚಿಣ್ಣರು ಕುಣಿ ದಾಡತೊಡಗಿದ್ದಾರೆ ಎಂದು ಪ್ರಧಾನಿ ಹರ್ಷ ವ್ಯಕ್ತಪಡಿಸಿದರು.

