ವಿಶಾಖಪಟ್ಟಣಂ : ಆಂಧ್ರಪ್ರದೇಶದಲ್ಲಿ ಟಿಡಿಪಿ ನೇತೃತ್ವದ ಎನ್‌ಡಿಎ ಸರಕಾರ ರಚನೆಯಾದ ಬಳಿಕ ಪ್ರಥಮ ಬಾರಿಗೆ ಪ್ರಧಾನಿ ಮೋದಿ ಬುಧವಾರ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ವಿಶಾಖಪಟ್ಟಣಂಗೆ ಆಗಮಿಸಿದ ಮೋದಿ ಜತೆಗೂಡಿದ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಡಿಸಿಎಂ ಜನಸೇನಾ ಪಕ್ಷದ ಮುಖ್ಯಸ್ಥಪವನ್ ಕಲ್ಯಾಣ್ ನಗರದಲ್ಲಿ ರೋಡ್ ಶೋ ನಡೆಸಿದ್ದಾರೆ.
ರೈಲ್ವೇ ವಲಯ, ಅಂಕಾಪಲ್ಲಿಯ ಹೈಡೋಜನ್ ಉತ್ಪಾದನ ಕೇಂದ್ರ, ಕೃಷ್ಣಾಪಟ್ಟಣಂ ಕೈಗಾರಿಕ ವಲಯ ಸೇರಿದಂತೆ 2 ಲಕ್ಷ ಕೋಟಿ ರೂ.ಗೂ ಹೆಚ್ಚು ಮೌಲ್ಯದ ಯೋಜನೆಗಳ ಶಂಕುಸ್ಥಾಪನೆ ಹಾಗೂ ಚಾಲನೆಯನ್ನು ವರ್ಚುವಲ್ ಮೂಲಕ ಮೋದಿ ನೆರವೇರಿಸಿದರು.