ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಎರಡು ದಿನಗಳ ಅಧಿಕೃತ ರಷ್ಯಾ ಭೇಟಿಯ ವೇಳೆ, ಎರಡು ವರ್ಷಗಳಿಂದ ನಡೆಯುತ್ತಿರುವ ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವಂತೆ ನೇರ ಮನವಿ ಮಾಡಿದ್ದಾರೆ.
ಮಾಸ್ಕೋದಲ್ಲಿರುವ ಅಧ್ಯಕ್ಷ ವ್ಯಾದಿಮಿರ್ ಪುಟಿನ್ ಅವರ ಅಧಿಕೃತ ನಿವಾಸದಲ್ಲಿ ಆನೌಪಚಾರಿಕ ಸಭೆಯಲ್ಲಿ ಮೋದಿ, ಯುದ್ಧ ಭೂಮಿಯಲ್ಲಿ ಯಾವುದೇ ಪರಿಹಾರ ಕಂಡುಹಿಡಿಯಲು ಸಾಧ್ಯವಿಲ್ಲ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಒಳಗೊಂಡಂತೆ ವಿಶ್ವಸಂಸ್ಥೆಯ ಸನ್ನದನ್ನು ಗೌರವಿಸುವಂತೆ ಮನವಿ ಮಾಡಿದ್ದಾರೆ.
ಟಾವೆಲ್ ಏಜೆಂಟರು ಭಾರತೀಯ ಪ್ರಜೆಗಳನ್ನು ವಂಚಿಸಿ ರಷ್ಯಾ ಸೇನೆಗೆ ಬಲವಂತವಾಗಿ ಸೇರಿಸುತ್ತಿರುವ ವರದಿಗಳ ಬಗ್ಗೆಯೂ ಪ್ರಧಾನಿ ಮೋದಿ ಕಳವಳ ವ್ಯಕ್ತಪಡಿಸಿದರು. ವಂಚನೆಗೊಳಗಾಗಿರುವ ಎಲ್ಲರನ್ನೂ ಮರಳಿ ಭಾರತಕ್ಕೆ ಕಳುಹಿಸಲು ರಷ್ಯಾ ಬದ್ದತೆ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ, ಸುಮಾರು ಎರಡು ಡಜನ್ ಭಾರತೀಯರು ಈ ರೀತಿ ವಂಚನೆಗೊಳಗಾಗಿ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಹೋರಾಡುತ್ತಿದ್ದಾರೆ ಎನ್ನಲಾಗಿದೆ.