Home » ಇಂದು ವಾರಾಣಸಿಗೆ ಪ್ರಧಾನಿ ಮೋದಿ ಭೇಟಿ
 

ಇಂದು ವಾರಾಣಸಿಗೆ ಪ್ರಧಾನಿ ಮೋದಿ ಭೇಟಿ

by Kundapur Xpress
Spread the love

ವಾರಾಣಸಿ : ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಂಸದೀಯ ಕ್ಷೇತ್ರ ವಾರಾಣಸಿಗೆ ಇಂದು ಶುಕ್ರವಾರ ಭೇಟಿ ನೀಡಲಿದ್ದಾರೆ. ಅಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ ಬಳಿಕ ಕೆಲವು ಯೋಜನೆಗಳಿಗೆ ಚಾಲನೆ ನೀಡಿ, 3,880 ಕೋಟಿ ರೂ. ಮೌಲ್ಯದ 44 ಯೋಜನೆಗಳಿಗೆ ಶಂಕುಸ್ಥಾಪನೆ ನೇರವೇರಿಸಲಿದ್ದಾರೆ.

ವಾರಾಣಸಿಯ ವಿಭಾಗೀಯ ಆಯುಕ್ತ ಕೌಶಲ್ ರಾಜ್ ಶರ್ಮಾ ಈ ಬಗ್ಗೆ ಮಾತನಾಡಿ, ಪ್ರಧಾನಿ ಮೋದಿ ಅವರು ಗ್ರಾಮೀಣ ಅಭಿವೃದ್ಧಿ, ಅಂಗನವಾಡಿ ಕೇಂದ್ರ,  ಕುಡಿಯುವ ನೀರಿನ ಯೋಜನೆ ಸೇರಿದಂತೆ ಇತರ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಅಂತೆಯೇ ನಗರಾಭಿವೃದ್ಧಿಯ ಪೈಕಿ ಶಾಸ್ತ್ರೀ ಘಾಟ್, ಸಮ್ಮೇ ಘಾಟ್ ಮತ್ತು ಅನೇಕ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಶಂಕುಸ್ಥಾಪನೆ ನೆರವೇರಿಸಲಿರುವ ಯೋಜನೆಗಳಲ್ಲಿ, 25 ಯೋಜನೆಗಳು 2.250 ಕೋಟಿ ರೂ.ಗಳಾಗಿದ್ದು, ನಗರದ ವಿದ್ಯುತ್ ಮೂಲಸೌಕರ್ಯವನ್ನು ಬಲಪಡಿಸುವತ್ತ ಪ್ರಮುಖ ಗಮನ ಹರಿಸಿವೆ. ಇದರಲ್ಲಿ 15 ಹೊಸ ಸಬ್ ಸ್ಟೇಷನ್ ಗಳ ನಿರ್ಮಾಣ, ಹೊಸ ಟ್ರಾನ್ಸ್ ಫಾರ್ಮರ್ ಗಳ ಸ್ಥಾಪನೆ ಮತ್ತು 1,500 ಕಿ.ಮೀ ಹೊಸ ವಿದ್ಯುತ್ ಮಾರ್ಗಗಳನ್ನು ಹಾಕುವುದು ಸೇರಿದೆ. 24 ಗಂಟೆಗಳ ನಿರಂತರ ವಿದ್ಯುತ್ ಸರಬರಾಜು ಮಾಡುವ ಗುರಿಯೊಂದಿಗೆ ಚೌಕಘಾಟ್ ಬಳಿ ಹೊಸ 220 ಕೆವಿ ಸಬ್ ಸ್ಟೇಷನ್ ಸಹ ಬರಲಿದೆ. ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ‘ಮೂಲಸೌಕರ್ಯ ಯೋಜನೆಗಳು ಸಹ ಕಾರ್ಯಸೂಚಿಯಲ್ಲಿವೆ.

 

Related Articles

error: Content is protected !!