Home » ಜು.23ಕ್ಕೆ ಬ್ರಿಟನ್, 25ಕ್ಕೆ ಮಾಲ್ಡೀವ್ಸ್‌ಗೆ ಮೋದಿ
 

ಜು.23ಕ್ಕೆ ಬ್ರಿಟನ್, 25ಕ್ಕೆ ಮಾಲ್ಡೀವ್ಸ್‌ಗೆ ಮೋದಿ

by Kundapur Xpress
Spread the love

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರದಿಂದ ಇಂಗ್ಲೆಂಡ್ ಮತ್ತು ಮಾಲ್ಮೀಮ್ಸ್‌ಗೆ ನಾಲ್ಕು ದಿನಗಳ ಭೇಟಿ ನೀಡಲಿದ್ದು, ಒಟ್ಟಾರೆ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಮತ್ತು ಭಾರತ-ಯುಕೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಮೋದಿ ಮೊದಲು ಎರಡು ದಿನಗಳ ಪ್ರವಾಸದಲ್ಲಿ ಇಂಗ್ಲೆಂಡ್‌ಗೆ ಪ್ರಯಾಣಿಸಲಿದ್ದು ನಂತರ ಮಾಲ್ಡೀವ್ಸ್‌ಗೆ ಭೇಟಿ ನೀಡಿ ರಾಷ್ಟ್ರದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ  ಎಂದು ವಿದೇಶಾಂಗ ಸಚಿವಾಲಯ (ಎಂಇಎ) ತಿಳಿಸಿದೆ.

ಮಾಲ್ಡೀವ್ಸ್‌ಗೆ ನಾಯಕರ ಇಂಡಿಯಾ ಔಟ್ ಅಭಿಯಾನ ಮತ್ತು ಮುಯಿಜು ಅವರ ಚೀನಾ ಪರ ನಿಲುವಿನಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟ ನಂತರ ಪ್ರಧಾನಿ ಮೋದಿಯವರ ಮಾಲ್ಡೀವ್ಸ್‌ಗೆ ಇದು ಮೊದಲ ಭೇಟಿಯಾಗಿದೆ. 60ನೇ ರಾಷ್ಟ್ರೀಯ ದಿನಾಚರಣೆಯ ಮುಖ್ಯ ಅತಿಥಿಯಾಗಿ ಆಗಮಿಸಲಿರುವ ಪ್ರಧಾನಿ ಮೋದಿ, ಅಧ್ಯಕ್ಷ ಮುಯಿಜು ಅವರ ಆಹ್ವಾನದ ಮೇರೆಗೆ ಮಾಲ್ಡೀವ್ಸ್‌ಗೆ ಭೇಟಿ ನೀಡುತ್ತಿದ್ದಾರೆ.

 

Related Articles

error: Content is protected !!