ಹೊಸದಿಲ್ಲಿ : ಭಾರತ ಮತ್ತು ಫಿಲಿಪೀನ್ಸ್ ತಮ್ಮ ಸಂಬಂಧವನ್ನು ಅಧಿಕೃತವಾಗಿ ಕಾರ್ಯತಂತ್ರದ ಪಾಲುದಾರಿಕೆಗೆ ಏರಿಸಿದ್ದು, ರಕ್ಷಣೆ ಮತ್ತು ಕಡಲ ಸಹಕಾರದ ಮೇಲೆ ಹೆಚ್ಚಿನ ಗಮನ ಹರಿಸಿವೆ.
ಮಂಗಳವಾರ ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಫಿಲಿಪೀನ್ಸ್ ಅಧ್ಯಕ್ಷ ಫರ್ಡಿನ್ಯಾಂಡ್ ಆರ್ ಮಾರ್ಕೋಸ್ ಪರಸ್ಪರ ಕಾರ್ಯತಂತ್ರ ಸಹಕಾರದ ಕುರಿತು ಮಾತುಕತೆ ನಡೆಸಿದ್ದಾರೆ. ಫಿಲಿಪೀನ್ಸ್ ಕರಾವಳಿಯಲ್ಲಿ ಎರಡೂ ದೇಶಗಳು ನಡೆಸಿದ ಜಂಟಿ ನೌಕಾ ಸಮರಾಭ್ಯಾಸದ ಬಳಿಕ ಈ ಒಪ್ಪಂದ ಏರ್ಪಟ್ಟಿರುವುದು ಗಮನಾರ್ಹ
ಉಭಯ ದೇಶಗಳನ್ನು ಆಯ್ಕೆಯಿಂದ ಸ್ನೇಹಿತರು ಮತ್ತು ಅದೃಷ್ಟದಿಂದ ಪಾಲುದಾರರು ಎಂದು ಬಣ್ಣಿಸಿದ ಪ್ರಧಾನಿ ಮೋದಿ, ಹಿಂದೂ ಮಹಾಸಾಗರದಿಂದ ಪೆಸಿಫಿಕ್ ವರೆಗೆ ಸಮಾನ ಮೌಲ್ಯಗಳ ಆಧಾರದ ಮೇಲೆ ನಿಂತಿರುವ ಏಕತೆಯನ್ನು ಒತ್ತಿ ಹೇಳಿದರು. ಈ ಸ್ನೇಹ, ಭವಿಷ್ಯಕ್ಕೆ ಒಂದು ಭರವಸೆ ಎಂದಿರುವ ಮೋದಿ, ಭಾರತದ ಆಕ್ಟ್ ಈಸ್ಟ್ ಪಾಲಿಸಿ ಮತ್ತು ಪ್ರಾದೇಶಿಕ ಭದ್ರತೆ ಮತ್ತು ಬೆಳವಣಿಗೆಯ ಗುರಿ ಹೊಂದಿರುವ ಮಹಾ ಸಾಗರ ದೃಷ್ಟಿಕೋನದಲ್ಲಿ ಫಿಲಿಪೀನ್ಸ್ ಪ್ರಮುಖ ಪಾಲುದಾರ ರಾಷ್ಟ್ರ ಎಂದು ಹೇಳಿದ್ದಾರೆ

