ನವದೆಹಲಿ : ಕೆಲವರು ಭಾರತ ಅಭಿವೃದ್ಧಿ ಹೊಂದುವುದು ಕಷ್ಟ ಎಂದು ಭಾವಿಸಿದ್ದಾರೆ. ಇದು ತಪ್ಪು ಭಾರತದ ಯುವ ಜನಸಂಖ್ಯೆಯ ಸಾಮರ್ಥವು ದೇಶ ಅಭಿವೃದ್ಧಿಗೆ ಬಲ ತುಂಬಿ, ಅದನ್ನು ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕವಾಗಿ ಸಶಕ್ತವಾಗಿಸಲಿದೆ’ ಎಂದು ಪ್ರಧಾನಿ ನರೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸ್ವಾಮಿ ವಿವೇಕಾನಂದರ ಜನ್ಮದಿನವಾದ ರಾಷ್ಟ್ರೀಯ ಯುವ ದಿನದ ಅಂಗವಾಗಿ ಭಾನುವಾರ ನಡೆದ ವಿಕಸಿತ ಭಾರತ ಯುವ ನಾಯಕರ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ ದೇಶ ಮುಂದುವರೆಯಲು ದೊಡ್ಡ ಗುರಿಗಳನ್ನು ಇಟ್ಟುಕೊಳ್ಳಬೇಕು. ಭಾರತ ಅದನ್ನೇ ಮಾಡುತ್ತಿದೆ. ವಿಕಸಿತ ಭಾರತದ ಗುರಿಯೊಂದಿಗೆ ಎಲ್ಲಾ ನೀತಿ, ನಿರ್ಧಾರಗಳನ್ನು ರೂಪಿಸಿದರೆ ದೇಶ ಅಭಿವೃದ್ಧಿ ಹೊಂದುವಲ್ಲಿ ಸಂದೇಹವೇ ಇಲ್ಲ. ಇದನ್ನು ಕೇವಲ ಸರ್ಕಾರ ಮಾಡಲಾಗದು ಯುವಕರೂ ಕೈಜೋಡಿಸಬೇಕು. ಕೆಲವರು ಚಲ್ತಾ ಹೈ (ಏನೋ ಆಗುತ್ತಿದೆ, ಆಗಲಿ ಬಿಡು. ನಾವೇಕೆ ಬದಲಾವಣೆಗೆ ಮುಂದಾಗಬೇಕು) ಎಂಬ ಮನೋಭಾವನೆ ಹೊಂದಿದ್ದಾರೆ. ಇದು ಸರಿಯಲ್ಲ ಎಂದರು.