ಪ್ರಯಾಗ್‌ರಾಜ್ : ಡೋಂಗಿ ಜಾತ್ಯತೀತವಾದಿಗಳ ಕೂಟವೊಂದು ಸನಾತನ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬುಡಮೇಲು ಮಾಡಲು ತೀವ್ರ ಹುನ್ನಾರ ನಡೆಸಿವೆ ಎಂದು ಎಚ್ಚರಿಸಿರುವ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ ಕೋಮು ಗಲಭೆ ತಾಂಡವಿಸಿ ರಾಜಕೀಯ ಬೇಳೆ ಬೇಯಿಸುವುದು ಈ ಕೂಟದ ತಂತ್ರವೆಂದು ಆರೋಪಿಸಿದ್ದಾರೆ.
ಪ್ರಯಾಗ್‌ರಾಜ್‌ಗೆ ಮೂರು ದಿನಗಳ ಭೇಟಿ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮಸ್ತರ ಸಬಲೀಕರಣದ ಸಂಕಲ್ಪ ಬಲದಿಂದ ಕೋಮು ಧ್ರುವೀಕರಣದ ವಂಚನೆಯನ್ನು ಪ್ರಧಾನಿ ನರೇಂದ್ರ ಮೋದಿ ಧ್ವಂಸಗೊಳಿಸಿದ್ದಾರೆ. ಜಗತ್ತಿನಾದ್ಯಂತ ಸಂಘರ್ಷಗಳಿಂದಾಗಿ ಆತಂಕದ ಸನ್ನಿವೇಶವಿರುವ ಹೊರತೂ ಪ್ರಧಾನಿ ಮೋದಿ ಭಾರತದ ಹಿರಿಮೆ, ಗರಿಮೆಗಳನ್ನು ಘನತೆಯನ್ನು ಎತ್ತಿಹಿಡಿದಿದ್ದಾರೆ. ಭಾರತದ ಘನತೆಯನ್ನುಮಣ್ಣುಗೂಡಿಸಲು ಪ್ರಯತ್ನಿಸುತ್ತಿರುವವರು ಸೋಲನುಭವಿಸಿದ್ದಾರೆ. ಜಾಗತಿಕ ಬಿಕ್ಕಟ್ಟುಗಳಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮಾತ್ರ ಪರಿಹಾರೋಪಾಯ ನೀಡಬಲ್ಲರು ಎಂಬ ಆಶಾವಾದ ಇಡೀ ಜಗತ್ತಿಗಿರುವುದು ಪ್ರತಿಯೋರ್ವ ಭಾರತೀಯ ಪ್ರಜೆಗೆ ಹೆಮ್ಮೆಯ ವಿಚಾರ ಎಂದು ತಿಳಿಸಿದರು