74
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ದೃಢ ರಾಜಕೀಯ ಇಚ್ಛಾಶಕ್ತಿ ಮತ್ತು ವಿವಿಧ ತನಿಖಾ ಸಂಸ್ಥೆಗಳ ನಿಖರ ಬೇಹುಗಾರಿಕೆ ಸಾಮರ್ಥ್ಯ ಹಾಗೂ ರಾಷ್ಟ್ರದ ಮೂರೂ ಸಶಸ್ತ್ರ ಪಡೆಗಳ ಅತ್ಯಪೂರ್ವ ದಾಳಿ ಸಾಮರ್ಥ್ಯಗಳನ್ನು ಪ್ರತಿಬಿಂಬಿಸಿದ ಆಪರೇಶನ್ ಸಿಂಧೂರ್ ಎಂದು ಗೃಹ ಸಚಿವ ಅಮಿತ್ ಶಾ ಪ್ರಶಂಸಿಸಿದ್ದಾರೆ.
ವಿವಿಧ ತನಿಖಾ ಸಂಸ್ಥೆಗಳೊಂದಿಗೆ ಗುಪ್ತಚರ ಮಾಹಿತಿ ಹಂಚಿಕೆಗಾಗಿ ಮೇಲ್ದರ್ಜೆಗೇರಿಸಲಾದ ದಿಲ್ಲಿಯ ಮಲ್ಟಿ ಏಜೆನ್ಸಿ ಸೆಂಟನ್ನು ಉದ್ಘಾಟಿಸಿ ಸಚಿವ ಶಾ ಮೆಚ್ಚುಗೆಯ ನುಡಿಗಳಾನ್ನಾಡಿದರು. ಕಾನೂನು ಅನುಷ್ಟಾನ ಸಂಸ್ಥೆಗಳು ಸಕಾಲದಲ್ಲಿ ಸೂಕ್ತ ಮಾಹಿತಿಗಳನ್ನು ಪರಸ್ಪರ ಹಂಚಿಕೊಳ್ಳುವ ಆಶಯದಿಂದ ಮುಖ್ಯವಾಗಿ 26/11ರ ಮುಂಬೈ ದಾಳಿ ನಂತರ ಸ್ಥಾಪಿಸಲಾದ ಸಂಸ್ಥೆ ಮಲ್ಟಿ ಏಜೆನ್ಸಿ ಸೆಂಟರ್ ಗುಪ್ತಚರ ಮಂಡಳಿಯಡಿ ಇದು ಕಾರ್ಯ ನಿರ್ವಹಿಸುತ್ತಿದೆ.

