Home » ವರ್ಷಾಂತ್ಯದಲ್ಲಿ ಭಾರತಕ್ಕೆ ಭೇಟಿ : ಮಸ್ಕ್
 

ವರ್ಷಾಂತ್ಯದಲ್ಲಿ ಭಾರತಕ್ಕೆ ಭೇಟಿ : ಮಸ್ಕ್

by Kundapur Xpress
Spread the love

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ ಒಂದು ದಿನದ ನಂತರ, ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಿಇಒ ಎಲಾನ್ ಮಸ್ಕ್ ಅವರು ಈ ವರ್ಷದ ಕೊನೆಯಲ್ಲಿ ಭಾರತಕ್ಕೆ ತಮ್ಮ ಬಹುನಿರೀಕ್ಷಿತ ಭೇಟಿ ನೀಡುವುದಾಗಿ ಹೇಳಿದ್ದಾರೆ.

ಟೆಸ್ಲಾ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಎಲೆಕ್ನಿಕ್ ವಾಹನಗಳ ಸಮೂಹವನ್ನು ಪರಿಚಯಿಸಲು ಸಿದ್ಧವಾಗಿದ್ದು, ಈ ಹಿನ್ನೆಲೆಯಲ್ಲಿ ಮಸ್ತ್ ಭಾರತಕ್ಕೆ ಭೇಟಿ ನೀಡಲಿದ್ದಾರೆ. `ಈ ಕುರಿತು ಮಸ್ಕ್ ಎಕ್ಸ್ ಪೋಸ್ಟ್‌ನಲ್ಲಿ, ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡುವುದು ಗೌರವ ಎಂದು ಹೇಳಿದ್ದಾರೆ.

ಹೊಸದಿಲ್ಲಿ ಮತ್ತು ವಾಷಿಂಗ್ಟನ್ ಸುಂಕಗಳ ಮೇಲಿನ ವ್ಯತ್ಯಾಸಗಳನ್ನು ಅಳಿಸಿಹಾಕಲು ಮತ್ತು ವ್ಯಾಪಾರ ಒಪ್ಪಂದದ ಕಡೆಗೆ ಒಮ್ಮುಖವಾಗಲು ಪ್ರಯತ್ನಿಸುತ್ತಿರುವುದರಿಂದ, ಎಲಾನ್ ಮಸ್ಕ್ ಅವರೊಂದಿಗಿನ ಪ್ರಧಾನಿಯವರ ಸಂಭಾಷಣೆ ಎರಡೂ ರಾಷ್ಟ್ರಗಳಿಗೆ ನಿರ್ಣಾಯಕ ಹಂತದಲ್ಲಿದೆ.

 

Related Articles

error: Content is protected !!