ಹೊಸದಿಲ್ಲಿ : ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಮೂರನೇ ತಲೆಮಾರಿನ ಫೈರ್ ಅಂಡ್-ಫರ್ಗೆಟ್ ಆಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿ ನಾಗ್ ಮಾರ್ಕ್ 2ರ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದೆ
ರಾಜಸ್ಥಾನದ ಪೋಖ್ರಾನ್ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಸಿದ ಪ್ರಯೋಗಗಳಲ್ಲಿ ಕ್ಷಿಪಣಿ ಅಸಾಧಾರಣ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಪ್ರದರ್ಶಿಸಿತು. ಗರಿಷ್ಠ ಮತ್ತು ಕನಿಷ್ಠ ವ್ಯಾಪ್ತಿಯ ಮಿತಿಗಳಲ್ಲಿ ಎಲ್ಲಾ ಗೊತ್ತುಪಡಿಸಿದ ಗುರಿಗಳನ್ನು ನಾಶಪಡಿಸಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ
ಡಿಆರ್ಡಿಒ ಅಭಿವೃದ್ಧಿಪಡಿಸಿದ ನಾಗ್ ಮಾರ್ಕ್ 2 ಕ್ಷಿಪಣಿಯನ್ನು ನಿರ್ದಿಷ್ಟವಾಗಿ ಆಧುನಿಕ ಶಸ್ತ್ರಸಜ್ಜಿತ ಬೆದರಿಕೆಗಳನ್ನು ತಟಸ್ಥಗೊಳಿಸಲು ವಿನ್ಯಾಸಗೊಳಿಸಲಾಗಿದೆ. ಇದರ ಫೈರ್ ಅಂಡ್-ಫರ್ಗೆಟ್ ತಂತ್ರಜ್ಞಾನವು ಅಪರೇಟರ್ಗಳಿಗೆ ಉಡಾವಣೆಗೆ ಮುಂಚಿತವಾಗಿ ಗುರಿಗಳನ್ನು ಲಾಕ್ ಮಾಡಲು ಅನುವು ಮಾಡಿಕೊಡುತ್ತದೆ ಸಂಕೀರ್ಣ ಸನ್ನಿವೇಶಗಳಲ್ಲಿಯೂ ನಿಖರ ದಾಳಿಗಳನ್ನು ಇದು ಖಾತ್ರಿಪಡಿಸುತ್ತದೆ. ನಾಗ್ ಕ್ಷಿಪಣಿ ವಾಹಕ (ನಾಮಿಕಾ) ಆವೃತ್ತಿ 2ನ್ನೂ ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಲಾಯಿತು. ಇದು ಸಂಪೂರ್ಣ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಕಾರ್ಯಗತಗೊಳಿಸುವಲ್ಲಿ ನಿರ್ಣಾಯಕ ಹೆಜ್ಜೆ ಎಂದು ಸಚಿವಾಲಯ ತಿಳಿಸಿದೆ.