ಬಾಲಾಸೋರ್ : ಒಡಿಶಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಆರೋಗ್ಯ ದಿಢೀರ್ ಹದಗೆಟ್ಟಿರುವ ಹಿಂದೆ ಷಡ್ಯಂತ್ರ ಶಂಕೆ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಈಬೆಳವಣಿಗೆ ಕುರಿತು ತನಿಖೆ ನಡೆಸಲಾಗುವುದು ಎಂದು ಘೋಷಿಸಿದ್ದಾರೆ.
ವೇದಿಕೆಯೊಂದಲ್ಲಿ ನವೀನ್ ಭಾಷಣ ಮಾಡುವಾಗ ಅವರ ಕೈ ನಡುಗುತ್ತಿದ್ದ ಮತ್ತು ಮಾತು ತೊದಲುತ್ತಿದ್ದ ಹಾಗೂ ಈ ವೇಳೆ ಅವರ ಆಪ್ತ ಪಾಂಡಿಯನ್ ನವೀನ್ರ ಕೈ ಹಿಡಿದಿಡುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮೋದಿ ಈ ವಿಷಯ ಪ್ರಸ್ತಾಪಿಸಿ ಮಾತನಾಡಿದ್ದಾರೆ.