67
ನವದೆಹಲಿ : ವಿಪಕ್ಷಗಳು ಮುಂಗಾರು ಅಧಿವೇಶನದಲ್ಲಿ ಆಪರೇಷನ್ ಸಿಂದೂರ ಕುರಿತಾದ ಚರ್ಚೆಗೆ ಸಮಯ ಕೇಳುವ ಮೂಲಕ ತಮ್ಮ ಗೋರಿಯನ್ನು ತಾವೇ ತೋಡಿಕೊಂಡವು’ ಎಂದು ಪ್ರಧಾನಿ ನರೇಂದ್ರ ಮೋದಿ ವಿರೋಧ ಪಕ್ಷದ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಎನ್‌ಡಿಎ ಕೂಟದ 2ನೇ ಸಂಸದೀಯ ಸಭೆಯಲ್ಲಿ ಮಾತನಾಡಿದ ಪ್ರಧಾನಿ, ವಿಪಕ್ಷಗಳು ಪ್ರತಿದಿನ ಸಂಸತ್ತಿನ ಬಾವಿಗಿಳಿದು ಘೋಷಣೆಗಳನ್ನು ಕೂಗುವುದು, ಪ್ರತಿಭಟಿಸುವ ಮೂಲಕ ತಮ್ಮನ್ನು ತಾವು ಬಹಿರಂಗಪಡಿಸಿಕೊಳ್ಳುತ್ತಿವೆ.
ಸಮಾಧಿಯನ್ನು ತಾವೇ ಅಗೆಯುತ್ತಿರುವ ತಮ್ಮವರನ್ನು ನಾವು ಏಕೆ ತಡೆಯಬೇಕು ? ಮೈತ್ರಿಕೂಟದ ಸಂಸದರು ಏನೂ ನಡೆ ಯುತ್ತಿಲ್ಲ ಎಂದು ಭಾವಿಸಬಹುದು. ಆದರೆ ಬಹಳಷ್ಟು ನಡೆಯುತ್ತಿದೆ. ರಾಷ್ಟ್ರವು ಇದನ್ನೆಲ್ಲ ಗಮನಿಸುತ್ತಿದೆ’ ಎಂದು ಹರಿಹಾ ಯ್ದರು. ಆಪರೇಷನ್ ಸಿಂದೂರ, ಮಹಾ ದೇವದ ಯಶಸ್ಸಿಗೆ ಮೋದಿಯವರನ್ನು ಸಂಸದರು ಸನ್ಮಾನಿಸಿದರು.

