Home » ನೂತನ ಸಿಜೆಐ : ಗವಾಯಿ ಪ್ರಮಾಣವಚನ ಸ್ವೀಕಾರ
 

ನೂತನ ಸಿಜೆಐ : ಗವಾಯಿ ಪ್ರಮಾಣವಚನ ಸ್ವೀಕಾರ

by Kundapur Xpress
Spread the love

ನವದೆಹಲಿ : ಸುಪ್ರೀಂಕೋರ್ಟ್ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ಭೂಷಣ್ ರಾಮಕೃಷ್ಣಗವಾಯಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದ ಗಣತಂತ್ರ ಮಂಟಪದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ನೂತನ ಸಿಜೆಐಗೆ ಗೌಪ್ಯತೆಯ ಪ್ರಮಾಣ ಬೋಧಿಸಿದರು. ಬಳಿಕ ನ್ಯಾ. ಗವಾಯಿ, ತಮ್ಮ ತಾಯಿ ಕಮಲಾ ಗವಾಯಿ ಅವರ ಪಾದ ಸ್ಪರ್ಶಿಸಿ ಆರ್ಶೀವಾದ ಪಡೆದುಕೊಂಡರು.

ದೇಶದ ಮೊದಲ ಬೌದ್ಧ ಸಿಜೆಐ ಆಗಿರುವ ಗವಾಯಿ, 6 ತಿಂಗಳು ಈ ಹುದ್ದೆಯಲ್ಲಿರಲಿದ್ದಾರೆ. ಹಿಂದಿನ ಸಿಜೆಐ ನ್ಯಾ.ಸಂಜೀವ್ ಖನ್ನಾ ಮಂಗಳವಾರ ನಿವೃತ್ತರಾಗಿದ್ದಾರೆ.

1960ರಲ್ಲಿ ಮಹಾರಾಷ್ಟ್ರ ಅಮರಾವತಿಯಲ್ಲಿ ಜನಿಸಿದ್ದ ನ್ಯಾ.ಗವಾಯಿ 2003ರಲ್ಲಿ ಬಾಂಬೆ ಹೈಕೋರ್ಟಿನ ಹೆಚ್ಚುವರಿ ಜಡ್ಜ್ 2025ರಲ್ಲಿ ಪೂರ್ಣ ಪ್ರಮಾಣದ ಜಡ್ಜ್ ಆಗಿ ನೇಮಕಗೊಂಡಿದ್ದರು. 2019ರಲ್ಲಿ ಸುಪ್ರೀಂ ಜಡ್ಜ್ ಆಗಿ ಪದೋನ್ನತಿ ಹೊಂದಿ, ಸಂವಿಧಾನದ 370ನೇ ವಿಧಿ ರದ್ದು, ಚುನಾವಣಾ ಬಾಂಡ್ ರದ್ದು, ನೋಟು ಅಪನಗದೀಕರಣ ಎತ್ತಿಹಿಡಿದ ಪ್ರಕರಣ, ರಾಜ್ಯಗಳಿಗೆ ಒಳಮೀ ಸಲಿನ ಅವಕಾಶ ಕಲ್ಪಿಸಿದ ತೀರ್ಪು ನೀಡಿದ ಪೀಠಗಳ ಭಾಗವಾಗಿದ್ದರು. ಇವರ ತಂದೆ, ಆರ್.ಎಸ್. ಗವಾಯಿ ಬಿಹಾರ, ಕೇರಳ, ಸಿಕ್ಕಿಂನ ರಾಜ್ಯಪಾಲರಾಗಿದ್ದರು.

 

Related Articles

error: Content is protected !!