Home » ಬಾಂಗ್ಲಾದೇಶದ ನೋಟುಗಳಲ್ಲಿ ಹಿಂದು ದೇಗುಲಗಳ ಫೋಟೋ
 

ಬಾಂಗ್ಲಾದೇಶದ ನೋಟುಗಳಲ್ಲಿ ಹಿಂದು ದೇಗುಲಗಳ ಫೋಟೋ

ಹಿಂದು ನರಮೇಧದ ಬಳಿಕ ಕಣ್ಣೋರೆಸುವ ತಂತ್ರ

by Kundapur Xpress
Spread the love

ಢಾಕಾ : ಪ್ರಧಾನಿ ಶೇಖ್ ಹಸೀನಾ ಪದತ್ಯಾಗ ನಂತರ ಅಧಿಕಾರಕ್ಕೆ ಬಂದಿರುವ ಅವರ ವಿರೋಧಿ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ, ಹಸೀನಾ ತಂದೆಯೂ ಆಗಿರುವ ಬಾಂಗ್ಲಾದೇಶ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಅವರ ಚಿತ್ರವಿದ್ದ ನೋಟನ್ನು ಜೂ.1ರಿಂದ ಹಿಂಪಡೆದಿದೆ.

ಇದರ ಬದಲು ರಾಷ್ಟ್ರೀಯ ಸ್ಮಾರಕವಾಗಿರುವ ಕೆಲವು ಹಿಂದು ದೇಗುಲಗಳ ಚಿತ್ರ ಸೇರಿ ಅನ್ಯ ಚಿತ್ರಗಳನ್ನು ನೋಟಿನ ಮೇಲೆ ಹಾಕಿದೆ. ಹಸೀನಾ ಭಾರತಕ್ಕೆ ಪಲಾಯನ ಮಾಡಿದ ನಂತರ ಬಾಂಗ್ಲಾದಲ್ಲಿ ಹಿಂದೂ ವಿರೋಧಿ ಹಿಂಸೆ ನಡೆದಿದ್ದವು. ಆದರೆ ಈಗ ಹಿಂದು ದೇಗುಲ ಚಿತ್ರಕ್ಕೆ ಮಣೆ ಹಾಕುವ ಮೂಲಕ ತಾನು ಹಿಂದು ವಿರೋಧಿಯಲ್ಲ ಎಂದು ಬಾಂಗ್ಲಾ ಸರ್ಕಾರ ಸಂದೇಶ ಸಾರಲು ಹೊರಟಿದೆ ಎನ್ನಲಾಗಿದೆ.

 

Related Articles

error: Content is protected !!