114
ಹೊಸದಿಲ್ಲಿ: ಭಾರತೀಯ ಮೂಲದ ಅಮೆರಿಕನ್ ವಿಜ್ಞಾನಿ ಜಯ್ ಭಟ್ಟಾಚಾರ್ಯ ಅವರನ್ನು ದೇಶದ ಪ್ರಮುಖ ಆರೋಗ್ಯ ಸಂಶೋಧನೆ ಮತ್ತು ಧನಸಹಾಯ ಸಂಸ್ಥೆಯಾದ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಹೆಲ್ತ್ (ಎನ್‌ಐಎಚ್) ನ ಹೊಸ ನಿರ್ದೇಶಕರಾಗಿ ಅಮೆರಿಕ ಸೆನೆಟ್ ದೃಢಪಡಿಸಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಟ್ಟಾಚಾರ್ಯ ಅವರನ್ನು 18ನೇ ಎನ್‌ಐಎಚ್ ನಿರ್ದೇಶಕರಾಗಿ ನಾಮನಿರ್ದೇಶನ ಮಾಡಿದ್ದರು. ಭಟ್ಟಾಚಾರ್ಯ ಅವರ ನಾಯಕತ್ವದಲ್ಲಿ ವಿಶ್ವಾಸ ವ್ಯಕ್ತಪಡಿಸಿದ ಅವರು, ರಾಷ್ಟ್ರದ ವೈದ್ಯಕೀಯ ಸಂಶೋಧನೆಯನ್ನು ನಿರ್ದೇಶಿಸಲು ಮತ್ತು ಆರೋಗ್ಯವನ್ನು ಸುಧಾರಿಸುವ ಮತ್ತು ಜೀವಗಳನ್ನು ಉಳಿಸುವ ಪ್ರಮುಖ ಆವಿಷ್ಕಾರಗಳನ್ನು ಮಾಡಲು ಡಾ.ಭಟ್ಟಾಚಾರ್ಯ ಅವರು ರಾಬರ್ಟ್ ಎಫ್ ಕೆನಡಿ ಜೂನಿಯರ್ ಅವರ ಸಹಕಾರದೊಂದಿಗೆ ಕೆಲಸ ಮಾಡುತ್ತಾರೆ ಎಂದು ಹೇಳಿದರು.

