43
ಹೊಸದಿಲ್ಲಿ : ಭೂಮಿ ನಿರೀಕ್ಷಣಾ ಉಪಗ್ರಹ ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಡಾರ್ (ನಿಸಾರ್) ಅನ್ನು ಬುಧವಾರ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಂಜೆ 5:40ಕ್ಕೆ ಯಶಸ್ವಿ ಉಡಾವಣೆ ಮಾಡಲಾಯಿತು. ಈ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ, ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಹಯೋಗದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ. ನಿಸಾರ್, ಇದು ವಿಶ್ವದ ಅತ್ಯಾಧುನಿಕ ಭೂ ನಿರೀಕ್ಷಣಾ ಉಪಗ್ರಹವಾಗಿದೆ.
ಅತ್ಯಾಧುನಿಕ ರಡಾರ್ ತಂತ್ರಜ್ಞಾನ ಅಳವಡಿಸಿರುವ ನಿಸಾರ್ ಉಪಗ್ರಹವು ಹವಾಮಾನ ವೈಪರೀತ್ಯ, ಪ್ರಾಕೃತಿಕ ವಿಕೋಪ ಪ್ರತಿಕ್ರಿಯೆ ಮತ್ತು ಸಂಪನ್ಮೂಲ ನಿರ್ವಹಣೆ ಮುಂತಾದ ಜಾಗತಿಕ ಸವಾಲುಗಳ ನೈಜ ಸಮಯದ ಮಾಹಿತಿ ನೀಡಲಿದೆ. ಈ ಯೋಜನೆಯು ಜಾಗತಿಕ ಬಾಹ್ಯಾಕಾಶ ಪಾಲುದಾರಿಕೆಯಲ್ಲಿ ಭಾರತದ ಪ್ರಗತಿಯನ್ನು ಎತ್ತಿಹಿಡಿದಿದೆ.

