115
ನವದೆಹಲಿ : ಯೆಮೆನ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾರನ್ನು ಮರಣದಂಡನೆ ಶಿಕ್ಷೆಯಿಂದ ಪಾರು ಮಾಡಲು ರಾಜತಾಂತ್ರಿಕ ಮಾರ್ಗಗಳನ್ನು ಬಳಸುವಂತೆ ಕೇಂದ್ರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ‘ಸಲ್ಲಿಕೆಯಾಗಿರುವ ಪಿ ಐ ಎಲ್ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ.
ನಿಮಿಷಾ ಪ್ರಿಯಾಗೆ ಕಾನೂನು ನೆರವು ನೀಡಲು ರಚನೆಯಾಗಿರುವ ‘ಸೇವ್ ನಿಮಿಷಾ ಪ್ರಿಯಾ / ಇಂಟರ್‌ನ್ಯಾಷನಲ್ ಆಕ್ಷನ್ ಕೌನ್ಸಿಲ್’ ಪಿಐಎಲ್ ಸಲ್ಲಿಕೆ ಮಾಡಿತ್ತು. ಜು.16ಕ್ಕೆ ಮರಣ ದಂಡನೆ ನಿಗದಿಯಾಗಿರುವುದರಿಂದ ಬೇಗ ವಿಚಾರಣೆ ನಡೆಸುವಂತೆ ಮನವಿ ಮಾಡಲಾಗಿತ್ತು.
ಈ ಹಿನ್ನೆಲೆ ಸುಪ್ರೀಂ ಜು.14ಕ್ಕೆ ವಿಚಾರಣೆ ನಡೆಸಲು ದಿನಾಂಕ ನಿಗದಿ ಮಾಡಿದೆ.

