88
ವಾಷಿಂಗ್ಟನ್ : ಅಮೆರಿಕ ರಾತ್ರೋರಾತ್ರಿ ಇರಾನಿನ ಭೂಗತ ಪರಮಾಣು ನೆಲೆಗಳ ಮೇಲೆ ನಡೆಸಿದ ದಾಳಿಗೆ ‘ಆಪರೇಷನ್ ಮಿಡ್‌ನೈಟ್ ಹ್ಯಾಮರ್’ ಎಂದು ಹೆಸರಿಟ್ಟಿತ್ತು. ಈ ದಾಳಿಗೆ 125 ವಿಮಾನಗಳು, 14 ಬಾಂಬರ್‌ಗಳು ಮತ್ತು 24 ಟಾಮ್ ಹಾಕ್ ಕ್ಷಿಪಣಿ ಬಳಸಲಾ ಗಿತ್ತು ಎಂದು ಅಮೆರಿಕ ಮಾಹಿತಿ ನೀಡಿದೆ.
ಇರಾನ್ ಕಾಲಮಾನ ಭಾನುವಾರ ತಡರಾತ್ರಿ 2.00 ಗಂಟೆಯ ಸುಮಾರಿಗೆ ಆರಂಭವಾದ ದಾಳಿಯು 25 ನಿಮಿ ಷಗಳಲ್ಲಿ ಮುಕ್ತಾಯವಾಯಿತು ಎಂದು ಅಮೇರಿಕದ ಸೇನಾಧಿಕಾರಿ ಜ. ಡಾನ್ ಕೇನ್ ಮಾಹಿತಿ ನೀಡಿದ್ದಾರೆ. ಫೋರ್ಡೋ, ನಟಾಂಜ್, ಇಸ್ಪಹಾನ್ ಅಣು ಕೇಂದ್ರಗಳ ಮೇಲೆ ದಾಳಿ ನಡೆಸಿದ ಬಾಂಬರ್‌ಗಳು ಮಿಸೌರಿ ನೆಲೆಯಿಂದ ರವಾನೆಯಾಗಿದ್ದವು ಎಂದು ಅವರು ಹೇಳಿದ್ದಾರೆ.
ಅಮೆರಿಕದ ರಕಣಾ ಕಾರ್ಯದರ್ಶಿ ಪೀಟ್ ಹೆಗ್ಡೆತ್ ಇರಾನ್ ಮೇಲಿನ ದಾಳಿಯನ್ನು ದಿಟ್ಟ ಮತ್ತು ಅದ್ಭುತ ಎಂದು ಕರೆದಿದ್ದು, ‘ಇರಾನ್‌ನ ಪರಮಾಣು ಮಹತ್ವಾಕಾಂಕ್ಷೆಗಳು ನಾಶವಾಗಿವೆ. ನಾವು ನಡೆಸಿದ ದಾಳಿಯು ಇರಾನ್‌ನ ಸೇನೆ ಅಥವಾ ನಾಗರಿಕರನ್ನು ಗುರಿಯಾಗಿಸಿರಲಿಲ್ಲ ಎಂದು ಹೇಳಿದ್ದಾರೆ.

