ಟೋಕಿಯೊ : ಸುಝುಕಿ ಮೋಟಾರ್ ಕಾರ್ಪೊರೇಷನ್‌ನ ಮಾಜಿ ಅಧ್ಯಕ್ಷ ಮತ್ತು ಸಿಇಒ ಒಸಾಮು ಸುಝುಕಿ (94 ವರ್ಷ) ಲಿಂಫೋಮಾ ಕಾಯಿಲೆಯಿಂದ ನಿಧನರಾದರು ಎಂದು ಕಂಪನಿ ಶುಕ್ರವಾರ ಪ್ರಕಟಿಸಿದೆ. 40 ವರ್ಷಗಳಿಗಿಂತಲೂ ಹೆಚ್ಚು ಕಾಲ ನಡೆದ ಸುಝುಕಿಯ ನಾಯಕತ್ವವು ಜಪಾನಿನ ಆಟೋಮೋಟಿವ್ ಕಂಪನಿಯನ್ನು ಜಾಗತಿಕ ಶಕ್ತಿಯಾಗಿ ಪರಿವರ್ತಿಸಿತ್ತು. ವಿಶೇಷವಾಗಿ ಭಾರತದ ಆಟೋಮೋಟಿವ್ ವಲಯದಲ್ಲಿ ಅದರ ಮಾರುಕಟ್ಟೆ ನಾಯಕತ್ವವನ್ನು ಸ್ಥಾಪಿಸಿತು
ಒಸಾಮು ಸುಝುಕಿ ಕಂಪನಿಯ ನೆಟ್ವರ್ಕ್ ಮತ್ತು ಅದರ ವ್ಯಾಪ್ತಿಯನ್ನು ಪ್ರಪಂಚದಾದ್ಯಂತ ವಿಸ್ತರಿಸಿದ್ದರು. ಅವರ ಅಧಿಕಾರಾವಧಿಯಲ್ಲಿ ಭಾರತೀಯ ಕಂಪನಿ ಮಾರುತಿಯೊಂದಿಗೆ ಸುಜುಕಿಯ ಪಾಲುದಾರಿಕೆಯೂ ನಡೆದಿತ್ತು. ಜಾಗತಿಕ ವಾಹನ ಉದ್ಯಮದ ದಂತಕಥೆ ಒಸಾಮು ಸುಝುಕಿ ಅವರ ನಿಧನದಿಂದ ತೀವ್ರ ದುಃ ಖಿತನಾಗಿದ್ದೇನೆ ಎಂದು ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ