ನವದೆಹಲಿ : ‘ದೇವರು ನನ್ನನ್ನು ಮಹತ್ಕಾರ್ಯವೊಂದನ್ನು ಮಾಡುವ ಸಲುವಾಗಿ ಕಳುಹಿಸಿದ್ದಾನೆ ಆ ಕಾರ್ಯ ಮುಗಿಯುವವರೆಗೆ ಕೆಲಸ ಮಾಡುತ್ತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಲ್ಲದೆ, ಯಾರಿಗೆ ನನ್ನ ಮೇಲೆ ನಂಬಿಕೆ ಇದೆಯೋ ಅವರು ನಂಬಿರುವವರೆಗೂ ನಾನು ಕೆಲಸ ಮಾಡುತ್ತೇನೆ ಎಂದು ನುಡಿದಿದ್ದಾರೆ.
ಮಾಡಬೇಕಿರುವ ಕಾರ್ಯದ ಕುರಿತಾಗಿ ನನಗೆ ದೇವರು ಮೊದಲೇ ಸುಳಿವು ನೀಡುವುದಿಲ್ಲ, ಹಾಗೆಯೇ ನಾನೂ ದೇವರಿಗೆ ಆ ಕುರಿತು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಕೆಲವೇ ದಿನಗಳ ಹಿಂದೆ ದೇವರೇ ತನ್ನನ್ನು 2047ರೊಳಗೆ ಭಾರತವನ್ನು ವಿಕಸಿನ ಭಾರತ ಮಾಡುವ ಸಲುವಾಗಿ ಕಳುಹಿಸಿರುವುದಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ನನ್ನ ಬಗ್ಗೆ ಕೆಲವು ಜನ ಕೀಳಾಗಿ ಮಾತಾಡುತ್ತಾರೆ. ಮತ್ತೆ ಕೆಲವು ಜನ ಹೊಗಳುತ್ತಾರೆ. ಆದರೆ ನನ್ನ ಮೇಲೆ ನಂಬಿಕೆ ಇಟ್ಟವರಿಗೆ ನೋವುಂಟು ಮಾಡಬಾರದು ಎಂಬ ಏಕಮೇವ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇನೆ’ ಎಂದಿದ್ದಾರೆ, ಇದೇ ವೇಳೆ, ‘ಕೆಲವರು ನನ್ನನ್ನು ಹುಚ್ಚ ಎನ್ನಬಹುದು. ಆದರೂ ಹೇಳುತ್ತಿದ್ದೇನೆ. ದೇವರು ನನ್ನನ್ನು ಮಹತ್ಕಾರ್ಯವೊಂದನ್ನು ಮಾಡುವ ಸಲುವಾಗಿ ಕಳುಹಿಸಿದ್ದಾನೆ. ಒಮ್ಮೆ ದೇವರ ಉದ್ದೇಶ ಈಡೇರಿತು ಎಂದರೆ ನನ್ನ ಕೆಲಸ ಮುಗಿಯಿತು ಎಂದರ್ಥ, ಅದಕ್ಕಾಗಿಯೇ ನಾನು ಸಂಪೂರ್ಣವಾಗಿ ದೇವರಿಗೆ ನನ್ನನ್ನು ಅರ್ಪಿಸಿಕೊಂಡಿದ್ದೇನೆ’ ಎಂದು ಹೇಳಿದ್ದಾರೆ. ‘