ಇಂಫಾಲ : ಮಣಿಪುರದಲ್ಲಿ ವ್ಯಾಪಕ ಹಿಂಸಾಚಾರ ಪ್ರಾಣಹಾನಿಗಳಿಗೆ ಕಾರಣವಾದ ಮೂರು ಪ್ರಮುಖ ಪ್ರಕರಣಗಳ ತನಿಖಾ ಜವಾಬ್ದಾರಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಹಿಸಿ ಕೊಂಡಿದೆ ಗೃಹ ಖಾತೆ ನಿರ್ದೇಶ ಮೇರೆಗೆ ಎನ್‌ಐಎಯು ಪ್ರಸ್ತುತ ಪ್ರಕರಣಗಳನ್ನು ಮಣಿಪುರ ಪೊಲೀಸರಿಂದ ತನ್ನ ತನಿಖಾ ವ್ಯಾಪ್ತಿಗೆ ಪಡಕೊಂಡಿದೆ
ಮಣಿಪುರದಲ್ಲಿ ನಿರಂತರಗೊಂಡಿರುವ ಹಿಂಸಾತ್ಮಕ ಚಟುವಟಿಕೆಗಳು, ಸಾವು ನೋವು, ಸಾಮಾಜಿಕ ಅರಾಜಕತೆಗೆ ಈ ಮೂರು ಪ್ರಕರಣಗಳು ಮೂಲ ಕಾರಣವೆಂದು ಹೇಳಲಾಗಿದೆ. ಈ ಪೈಕಿ, ಮಣಿಪುರದ ಜಿರಿಬಾಮ್ ಪ್ರದೇಶದಲ್ಲಿ ಕುಕಿ ಉಗ್ರರು ಸಿಆರ್ ಪಿಎಫ್ ಯೋಧರತ್ತ ಗುಂಡು ಹಾರಿಸಿದ್ದಕ್ಕೆ ಪ್ರತಿಯಾಗಿ, ಯೋಧರ ಕಾರ್ಯಾಚರಣೆಯಲ್ಲಿ ಹತ್ತು ಕುಕಿ ಉಗ್ರರು ಸಾವಿಗೀಡಾದ್ದು ಒಂದು ಪ್ರಕರಣ. ಜಿರಿಬಾಮ್‌ನಿಂದ ಅಪಹೃತ ಆರು ಮಂದಿ ನಾಗರಿಕರು ಶವವಾಗಿ ಪತ್ತೆಯಾದ್ದು ಎರಡನೇ ಪ್ರಕರಣ. ಈ ದುರಂತಕ್ಕೆ ಸಂಬಂಧಿಸಿ ಎನ್‌ಐಎ ಪ್ರತ್ಯೇಕ ಪ್ರಕರಣ ದಾಖಲಿಸಿದೆ.
ಮಣಿಪುರದಲ್ಲಿ ದಿನೇ ದಿನೇ ಅಧಿಕವಾಗುತ್ತಿರುವ ಅಸ್ಥಿರತೆ ಹಿನ್ನೆಲೆಯಲ್ಲಿ, ಪ್ರಸ್ತುತ ಮೂರು ಪ್ರಕರಣಗಳನ್ನು ಎನ್‌ಐಎಗೆ ವರ್ಗಾಯಿಸಿ ಗೃಹಖಾತೆ ಆದೇಶ ಹೊರಡಿಸಿದೆ

