ದೇವರಿಯಾ : ಇಂಡಿಯಾ ಕೂಟದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಪ್ರಧಾನಿ ನರೇಂದ್ರ ಮೋದಿ, ಗಡಿಯಾಚೆಗಿನ ಜಿಹಾದಿಗಳು ಸಮಾಜವಾದಿ ಪಾರ್ಟಿ ಹಾಗೂ ಕಾಂಗ್ರೆಸ್ ನನ್ನು ಬೆಂಬಲಿಸುತ್ತಿದ್ದಾರೆ.ಈ ಕಾರಣಕ್ಕಾಗಿಯೇ ಇಂಡಿಯಾ ಕೂಟ ವೋಟ್ ಜಿಹಾದಿಗೆ ಕರೆ ಕೊಡುತ್ತಿದೆ ಎಂದು ಕಿಡಿಕಾರಿದ್ದಾರೆ.
ಭಾನುವಾರ ಉತ್ತರಪ್ರದೇಶದ ದೇವರಿಯಾದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ‘ಭಾರತದಲ್ಲಿ ಇಂಡಿಯಾ ಕೂಟ ಜಯಿಸಬೇಕು ಎಂದು ಪಾಕಿಸ್ತಾನದಲ್ಲಿ ಜಿಹಾದಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ನಾವು ವಿರೋಧಿಸುತ್ತಿರುವುದಕ್ಕೆ ‘ಇಂಡಿ ಜಮಾತ್‌ಗಳು’ ನನ್ನನ್ನು ವಿರೋಧಿಸುತ್ತಿವೆ ಎಂದು ಕಿಡಿಕಾರಿದರು.
‘ಇತ್ತೀಚೆಗೆ ಪಾಕಿಸ್ತಾನದ ನಾಯಕರು ಹಾಗೂ ಜಿಹಾದಿಗಳು ಕಾಂಗ್ರೆಸ್‌ನನ್ನು ಬೆಂಬಲಿಸಿ ರಾಹುಲ್ ಗಾಂಧಿ ಅವರ ಭಾಷಣಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಅಲ್ಲದೇ ಆಮ್ ಆದಿ ಪಕ್ಷದ ಟ ಅರವಿಂದ್ ಕೇಜಿವಾಲ್ ಅವರಗೂ ಬೆಂಬಲ ನುಡಿ ಹೇಳಿದ್ದರು