Home » ಇಂದು ಧರೆಗೆ ಶುಭಾಂಶು ಶುಕ್ಲಾ
 

ಇಂದು ಧರೆಗೆ ಶುಭಾಂಶು ಶುಕ್ಲಾ

ಐ ಎಸ್‌ ಎಸ್‌ನಿಂದ ಹೊರಟ ಗಗನಯಾತ್ರಿಗಳು

by Kundapur Xpress
Spread the love

ಹೊಸದಿಲ್ಲಿ : ಇಸ್ರೋ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿ ಆಕ್ಸಿಯಂ-4 ಮಿಷನ್‌ ಗಗನಯಾತ್ರಿಗಳು ಸೋಮವಾರ ಭೂಮಿಗೆ ತಮ್ಮ ಪ್ರಯಾಣ ಆರಂಭಿಸಿದ್ದಾರೆ. ಅವರ ಬಾಹ್ಯಾಕಾಶ ನೌಕೆ, ಡ್ರಾಗನ್ ಗ್ರೇಸ್, ಯೋಜಿತ ವೇಳಾ ಪಟ್ಟಿಯಿಂದ 10 ನಿಮಿಷಗಳ ಸ್ವಲ್ಪ ವಿಳಂಬವಾಗಿ, ಅಂದರೆ ಸಂಜೆ 4:45 (ಭಾರತೀಯ ಕಾಲಮಾನ) ಕೈ ಐ ಎಸ್ ಎಸ್‌ನಿಂದ ಹೊರ‌ ಬಂದಿತು.

ಸಿಬ್ಬಂದಿ ಕಳೆದ 18 ದಿನಗಳನ್ನು ಕಳೆದ ಐಎಸ್‌ಎಸ್‌ನಿಂದ ಸುರಕ್ಷಿತವಾಗಿ ದೂರ ಸರಿಯಲು ಡ್ಯಾಗನ್ ಬಾಹ್ಯಾಕಾಶ ನೌಕೆ ತನ್ನ ಭ್ರಸ್ಟರ್‌ಗಳನ್ನು ಎರಡು ಬಾರಿ ಹಾರಿಸಿತು. ಅನ್ ಡಾಕ್ ಮಾಡುವ ಮೊದಲು, ನಾಲ್ವರು ಗಗನಯಾತ್ರಿಗಳಾದ ಶುಕ್ಲಾ, ಕಮಾಂಡರ್ ಪೆಗ್ಗಿ ವಿಟ್ಸನ್, ಪೋಲೆಂಡ್‌ ಮಿಷನ್ ಸ್ಪೆಷಲಿಸ್ಟ್‌ಗಳಾದ ಸ್ಲಾವೊಜ್ ಉಜ್ಞಾನಿ-ವಿಸ್ತೀವಿ ಮತ್ತು ಹಂಗೇರಿಯ ಟಿಬೋರ್ ಕಾಪು ತಮ್ಮ ಸ್ಪೇಸ್ ಸೂಟ್‌ಗಳನ್ನು ಧರಿಸಿ ಬಾಹ್ಯಾಕಾಶ ನೌಕೆಯನ್ನು ನಿಲ್ದಾಣಕ್ಕೆ ಸಂಪರ್ಕಿಸುವ ಕದ (ಹ್ಯಾಚ್)ವನ್ನು ಮಧ್ಯಾಹ್ನ 2:37 ಕ್ಕೆ ಮುಚ್ಚಿದರು.

ಮಿಷನ್ ಅವಲೋಕನ :

ಆಕ್ಸಿಯಂ-4 ಸಿಬ್ಬಂದಿ ಐಎಎಸ್ ನಲ್ಲಿ ಸುಮಾರು 433 ಗಂಟೆಗಳನ್ನು ಕಳೆದಿದ್ದಾರೆ. 288 ಬಾರಿ ಕಕ್ಷೆ ಸುತ್ತಿದ್ದಾರೆ, ಜೂನ್ 26 ರಂದು ಡಾಕಿಂಗ್ ಮಾಡಿದ ನಂತರ ಸುಮಾರು 7.6 ಮಿಲಿಯನ್ ಮೈಲುಗಳನ್ನು ಕ್ರಮಿಸಿದ್ದಾರೆ. ರಾಕೇಶ್ ಶರ್ಮಾ ನಂತರ ಎರಡನೇ ಭಾರತೀಯ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಶುಕ್ಲಾ, ಭೂಮಿಗೆ ಮರಳುವ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸುತ್ತಾ ನಾವು ಶೀಘ್ರದಲ್ಲೇ ಭೂಮಿಯಲ್ಲಿ ಭೇಟಿಯಾಗುತ್ತೇವೆ ಎಂದು ಹೇಳಿದ್ದಾರೆ.

 

Related Articles

error: Content is protected !!