ಹೊಸದಿಲ್ಲಿ: ಪ್ರಧಾನಿ ನರೇಂದ್ರ ದಾಮೋದರ ದಾಸ್ ಮೋದಿ ಅವರು ಸತತ ಮೂರನೇ ಅವಧಿಗಾಗಿ ಭಾರತದ ಪ್ರಧಾನಿಯಾಗಿ ಭಾನುವಾರ ಪ್ರಮಾಣವಚನ ಸ್ವೀಕರಿಸಿದರು. ಭಾನುವಾರ ಸಂಜೆ 7.15ಕ್ಕೆ ಸರಿಯಾಗಿ ಮೋದಿಯವರು ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಬ್ರೌಪದಿ ಮುರ್ಮು ಅವರಿಂದ ಪ್ರಮಾಣವಚನ ಸ್ವೀಕರಿಸಿ ಇತಿಹಾಸ ಸೃಷ್ಟಿಸಿದರು. ಈ ಮೂಲಕ 73 ವರ್ಷ ವಯಸ್ಸಿನ ಮೋದಿಯವರು, 3 ಅವಧಿಗಳಲ್ಲಿ ಪ್ರಧಾನಿಯಾಗಿದ್ದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸಾಧನೆಯನ್ನು ಸರಿಗಟ್ಟಿದರು.
30 ಸಂಪುಟ ದರ್ಜೆ, ಐವರು ಸ್ವತಂತ್ರ ಹೊಣೆ ಮತ್ತು 36 ಮಂದಿ ರಾಜ್ಯ ಸಚಿವರು ಸೇರಿದಂತೆ 72 ಮಂದಿ ಪ್ರಮಾಣ ವಚನ ಸ್ವೀಕರಿಸಿದರು. 24 ರಾಜ್ಯಗಳ 11 ಪಕ್ಷಗಳಿಗೆ ಸೇರಿದ 72 ನಾಯಕರು ಮೋದಿ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಮೋದಿಯವರು ಸೇರಿದಂತೆ ಎಲ್ಲ ಸಚಿವರು ದೇವರ ಹೆಸರಲ್ಲಿ ಪ್ರತಿಜ್ಞೆ ಸ್ವೀಕರಿಸಿದರು. ಪ್ರಧಾನಿ ಮೋದಿಯವರಲ್ಲದೆ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ಜೆ.ಪಿ.ನಡ್ಡಾ, ನಿರ್ಮಲಾ ಸೀತಾರಾಮನ್, ಜೈಶಂಕರ್, ಶಿವರಾಜ್ ಸಿಂಗ್ ಚೌಹಾಣ್, ಪಿಯೂಷ್ ಗೋಯೆಲ್, ಅಶ್ವಿನಿ ವೈಷ್ಣವ್, ಗಜೇಂದ್ರ ಸಿಂಗ್ ಶೇಖಾವತ್, ಅರ್ಜುನ್ ಸಿಂಗ್ ಮೇಫ್ಲಾಲ್, ಓರಾಮ್, ಧರ್ಮೇಂದ್ರ ಪ್ರಧಾನ್ ಮುಂತಾದ ಪ್ರಮುಖರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು