Home » ಕೆನಡ ವಿರುದ್ದ ಮೋದಿ ವಾಗ್ದಾಳಿ
 

ಕೆನಡ ವಿರುದ್ದ ಮೋದಿ ವಾಗ್ದಾಳಿ

by Kundapur Xpress
Spread the love

ಹೊಸದಿಲ್ಲಿ : ಬ್ರಾಂಪ್ಟನ್‌ನಲ್ಲಿರುವ ಹಿಂದೂ ಸಭಾ ದೇವಾಲಯದ ಮೇಲೆ ಖಲಿಸ್ತಾನಿ ಉಗ್ರರು ದಾಳಿ ನಡೆಸಿದ್ದು, ಘಟನೆಯನ್ನು ಭಾರತ ಮತ್ತು ಕೆನಡಾದ ಜನಪ್ರತಿನಿಧಿಗಳು ತೀವ್ರವಾಗಿ ಖಂಡಿಸಿದ್ದಾರೆ.

ಕೆನಡಾದಲ್ಲಿನ ಎಲ್ಲಾ ಧಾರ್ಮಿಕ ಪೂಜಾ ಸ್ಥಳಗಳನ್ನು ಯಾವುದೇ ರೀತಿಯ ಭಯೋತ್ಪಾದಕ ದಾಳಿಗಳಿಂದ ರಕ್ಷಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಟ್ರುಡೋ ಸರ್ಕಾರವನ್ನು ಭಾರತ ಒತ್ತಾಯಿಸಿದೆ.

ಕೆನಡಾದಲ್ಲಿ ಭಾರತ ಮತ್ತು ಹಿಂದು ವಿರೋಧಿ ಘಟನೆಗಳ ಬಗ್ಗೆ ಇದೇ ಮೊದಲ ಬಾರಿ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿಯವರು, ಹಿಂದೂ ದೇವಾಲಯದ ಮೇಲೆ ನಡೆದ ಉದ್ದೇಶಪೂರ್ವಕ ದಾಳಿ ಮತ್ತು ಅದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದವರಲ್ಲಿ ಮೂವರು ಹಿಂದುಗಳನ್ನು ಬಂಧಿಸಿರುವ ಕೆನಡಾ ಪೊಲೀಸರ ನಡೆಯನ್ನು ತೀವ್ರವಾಗಿ ಪ್ರಧಾನಿ ಮೋದಿ  ಖಂಡಿಸಿದ್ದಾರೆ

   

Related Articles

error: Content is protected !!